ಪುತ್ತೂರು, ಸೆಪ್ಟೆಂಬರ್ 08, 2025 (ಕರಾವಳಿ ಟೈಮ್ಸ್) : ವಿಟ್ಲ ಮತ್ತು ಉಪ್ಪಿನಂಗಡಿಗೆ ಅಗ್ನಿ ಶಾಮಕ ಠಾಣೆಯ ಅಗತ್ಯವಿದ್ದು, ಈ ವಿಚಾರವನ್ನು ಅಧಿವೇಶನದಲ್ಲೂ ಸರಕಾರದ ಗಮನಕ್ಕೆ ತಂದಿದ್ದೇನೆ. 15 ದಿವಸದೊಳಗೆ ಜಾಗ ಮಂಜೂರಾತಿಗೆ ಶಾಸಕ ಅಶೋಕ್ ರೈ ಕಂದಾಯ ಇಲಾಖೆಗೆ ಸೂಚಿಸಿದ್ದಾರೆ.
ಸೋಮವಾರ ಶಾಸಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಜಿಲ್ಲಾ ಅಗ್ನಿ ಶಾಮಕದಳ ಅಧಿಕಾರಿ ಮಹಮ್ಮದ್ ಜುಲ್ಫಿಕರ್ ನವಾಝ್ ಕೆ ಪಿ ಅವರು ವಿಟ್ಲ ಮತ್ತು ಉಪ್ಪಿನಂಗಡಿಯಲ್ಲಿ ಅಗ್ನಿ ಶಾಮಕ ದಳ ಠಾಣೆ ನಿರ್ಮಾಣವಾಗುವಲ್ಲಿ ಈಗಾಗಲೇ ವಿಟ್ಲದಲ್ಲಿ ಜಾಗ ಗುರುತಿಸಲಾಗಿದೆ. ಉಪ್ಪಿನಂಗಡಿಯಲ್ಲೂ ಜಾಗದ ಅವಶ್ಯಕತೆ ಇದ್ದು ಜಾಗ ಮಂಜೂರಾತಿ ವಿಚಾರದಲ್ಲಿ ಶಾಸಕರ ಜೊತೆ ಚರ್ಚೆ ನಡೆಸಿದರು. ಈ ವೇಳೆ ಶಾಸಕರು ಕಂದಾಯ ಅಧಿಕಾರಿಗಳಿಗೆ ಕರೆ ಮಾಡಿ ಅಗ್ನಿ ಶಾಮಕ ಠಾಣೆ ನಿರ್ಮಾಣವಾಗುವಲ್ಲಿ ವಿಟ್ಲ ಮತ್ತು ಉಪ್ಪಿನಂಗಡಿಯಲ್ಲಿ 15 ದಿನದೊಳಗೆ ಜಾಗ ಗುರುತಿಸಿ ಇಲಾಖೆಗೆ ಹಸ್ತಾಂತರ ಮಾಡುವಲ್ಲಿ ಕ್ರಮವಹಿಸಬೇಕು ಎಂದು ಸೂಚಿಸಿದರು.
ವಿಟ್ಲ ಮತ್ತು ಉಪ್ಪಿನಂಗಡಿಗೆ ಅಗ್ನಿ ಶಾಮದಳ ಠಾಣೆ ಅಗತ್ಯವಾಗಿ ಬೇಕಾಗಿದ್ದು, ಈ ಭಾಗದ ಜನರ ಬಹು ವರ್ಷದ ಬೇಡಿಕೆಯೂ ಆಗಿದೆ. ಈ ಬಗ್ಗೆ ಕಳೆದ ಅಧಿವೇಶನದಲ್ಲಿ ಸರಕಾರದ ಗಮನವನ್ನೂ ಸೆಳೆದಿದ್ದೆ. ಇದೀಗ ಸರಕಾರದ ಸೂಚನೆಯಂತೆ ಎರಡೂ ಕಡೆಗಳಲ್ಲಿ ಅಗ್ನಿ ಶಾಮಕ ದಳ ಠಾಣೆ ನಿರ್ಮಾಣವಾಗಲಿದೆ. ವಿಟ್ಲದಲ್ಲಿ ಠಾಣೆ ನಿರ್ಮಾಣವಾದಲ್ಲಿ ಆ ಭಾಗಕ್ಕೆ ಸೌಲಭ್ಯ ನೀಡಿದಂತಾಗುತ್ತದೆ. ಉಪ್ಪಿನಂಗಡಿಯಲ್ಲಿ ನಿರ್ಮಾಣವಾದರೆ ಉಪ್ಪಿನಂಗಡಿ ಮತ್ತು ಕಡಬ ಭಾಗಕ್ಕೂ ಪ್ರಯೋಜನಕಾರಿಯಾಗಲಿದೆ. ಜಾಗ ಮಂಜೂರಾತಿಯಾದ ತಕ್ಷಣವೇ ಇದಕ್ಕೆ ಅನುದಾನವನ್ನು ಒದಗಿಸಲಾಗುವುದು ಎಂದು ಶಾಸಕ ರೈ ತಿಳಿಸಿದ್ದಾರೆ.
0 comments:
Post a Comment