ಮಂಗಳೂರು, ಸೆಪ್ಟೆಂಬರ್ 02, 2025 (ಕರಾವಳಿ ಟೈಮ್ಸ್) : ಮಂಗಳೂರಿನ ಸರ್ವಿಸ್ ಬಸ್ ಸ್ಟಾಂಡ್ ಬಳಿ ಇರುವ ಇಂದಿರಾ ಕ್ಯಾಂಟೀನ್ ಎದುರು ಸುಮಾರು 50-55 ವರ್ಷ ವಯಸ್ಸಿನ ಅಪರಿಚಿತ ಗಂಡಸು ಮೈ ಮೇಲೆ ಬಟ್ಟೆ ಇಲ್ಲದೆ ಅಂಗಾತನೆ ಬಿದ್ದಿರುವುದು ಪತ್ತೆಯಾಗಿದ್ದು, ವೆನ್‍ಲಾಕ್ ಆಸ್ಪತ್ರೆಗೆ ದಾಖಲಿಸಿ ಪರೀಕ್ಷಿಸಿದಾಗ ಮೃತಪಟ್ಟಿರುವುದಾಗಿ ದೃಢÀಪಟ್ಟಿದೆ.
ಮೃತದೇಹದ ಚಹರೆ : ಸುಮಾರು 5 ಅಡಿ ಎತ್ತರ, ಗೋಧಿ ಮೈ ಬಣ್ಣ, ಸಾಧಾರಣ ಶರೀರ, ಕೋಲು ಮುಖ, ಬಿಳಿ ಮತ್ತು ಕಪ್ಪು ಮಿಶ್ರಿತ ತಲೆ ಕೂದಲು, ಬಿಳಿ ಮತ್ತು ಕಪ್ಪು ಮಿಶ್ರಿತ ಮೀಸೆ ಮತ್ತು ಗಡ್ಡ ಹೊಂದಿರುತ್ತಾರೆ. ಕಂದು ಬಣ್ಣದ ಪ್ಯಾಂಟು ಜೊತೆಗೆ ಬೆಲ್ಟ್ ಧರಿಸಿದ್ದರು. ಮೃತ ದೇಹದ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ದಕ್ಷಿಣ ಪೆÇಲೀಸ್ ಠಾಣೆ ಸಂಪರ್ಕಿಸುವಂತೆ ಠಾಣಾ ಪ್ರಕಟನೆ ತಿಳಿಸಿದೆ.
0 comments:
Post a Comment