ಮಂಗಳೂರು, ಸೆಪ್ಟೆಂಬರ್ 04, 2025 (ಕರಾವಳಿ ಟೈಮ್ಸ್) : ನಗರದ ಹಂಪನಕಟ್ಟೆ ಕಡೆಯಿಂದ ಕ್ಲಾಕ್ ಟವರ್ ಸರ್ಕಲ್ ಕಡೆಗೆ ಹೋಗುವ ರಸ್ತೆಯಲ್ಲಿ ವೆನ್ ಲಾಕ್ ಆಸ್ಪತ್ರೆ ಕಡೆಯಿಂದ ಭೂಷಣ್ ಬಾರ್ ಬಳಿಯಿರುವ ಬಸ್ಸು ನಿಲ್ದಾಣದ ಕಡೆಗೆ ರಸ್ತೆ ದಾಟುತ್ತಿದ್ದ ಸುಮಾರು 58 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಗೆ ಬೈಕ್ ಡಿಕ್ಕಿಯಾದ ಘಟನೆ ಆಗಸ್ಟ್ 28 ರಂದು ನಡೆದಿತ್ತು. ಅಪಘಾತದಿಂದ ಅಪರಿಚಿತ ಗಂಡಸಿನ ತಲೆಗೆ ತೀವ್ರ ಸ್ವರೂಪದ ಗಾಯವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವರನ್ನು ವೆನ್‍ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿರುತ್ತಾರೆ.
ಮೃತದೇಹದ ಚಹರೆ : ಸುಮಾರು 5.7 ಅಡಿ ಎತ್ತರ, ನೀಲಿ ಬಣ್ಣದ ಟೀ ಶರ್ಟ್ ಮತ್ತು ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದರು. ಮೃತದೇಹದ ಗುರುತು ಪತ್ತೆಯಾದಲ್ಲಿ ಕದ್ರಿ ಸಂಚಾರ ಪೂರ್ವ ಪೆÇಲೀಸ್ ಠಾಣೆ ಸಂಪರ್ಕಿಸುವಂತೆ ಠಾಣಾ ಪಿಎಸ್ಸೈ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




























0 comments:
Post a Comment