ಮಂಗಳೂರು, ಸೆಪ್ಟೆಂಬರ್ 07, 2025 (ಕರಾವಳಿ ಟೈಮ್ಸ್) : ತ್ರಿಪಲ್ ರೈಡ್ ಮೂಲಕ ಸ್ಕೂಟರ್ ಚಲಾಯಿಸಿಕೊಂಡು ಬಂದಿದ್ದ ಅಪ್ರಾಪ್ತ ಬಾಲಕನನ್ನು ಆಗಸ್ಟ್ 25 ರಂದು ತಡೆದ ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ ಹಿನ್ನಲೆಯಲ್ಲಿ ನ್ಯಾಯಾಲಯ ಸ್ಕೂಟರ್ ಮಾಲಕಗೆ ಸೆಪ್ಟೆಂಬರ್ 3 ರಂದು 27,500/- ರೂಪಾಯಿ ದಂಡ ವಿಧಿಸಿದೆ.
ಆಗಸ್ಟ್ 25 ರಂದು ಸಂಜೆ 6.35 ರ ವೇಳೆಗೆ ಬಜಪೆ ಪೆÇಲೀಸ್ ಠಾಣಾ ಪಿಎಸ್ಸೈ ಅವರು ಠಾಣಾ ಸಿಬ್ಬಂದಿಗಳೊಂದಿಗೆ ಬಜಪೆ ಪೇಟೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ತ್ರಿಪ್ಪಲ್ ರೈಡ್ ಮಾಡಿಕೊಂಡು ಬಂದ ಸ್ಕೂಟರನ್ನು ನಿಲ್ಲಿಸಿ ವಿಚಾರಿಸಿ ದಾಖಲಾತಿಗಳನ್ನು ಪರಿಶೀಲಿಸಿದ್ದಾರೆ. ಈ ಸಂದರ್ಭ ಸ್ಕೂಟರನ್ನು ಅಪ್ರಾಪ್ತ ವಯಸ್ಸಿನ ಬಾಲಕ ಚಲಾಯಿಸಿಕೊಂಡು ಬಂದಿದ್ದು, ಹಿಂಬದಿ ಸೀಟಿನಲ್ಲಿ ಇಬ್ಬರು ಸವಾರರು ಇದ್ದರು. ಅಪ್ರಾಪ್ತ ವಯಸ್ಸಿನ ಬಾಲಕಗೆ ಸ್ಕೂಟರ್ ಚಲಾಯಿಸಲು ಪೆÇೀಷಕರು ವಾಹನ ನೀಡಿರುವುದು ದೃಢಪಟ್ಟಿದೆ.
ಪ್ರಕರಣದ ಬಗ್ಗೆ ಬಜಪೆ ಪೆÇಲೀಸರು ಕಲಂ 199ಎ, 194ಸಿ, 194ಡಿ, 130 ಜೊತೆಗೆ 177 ಐ ಎಂ ವಿ ಕಾಯ್ದೆಯಡಿ ದೋಷರೋಪಣಾ ಪಟ್ಟಿ ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಸೆ 3 ರಂದು ಸ್ಕೂಟರ್ ಮಾಲಕಗೆ 27,500 /- ರೂಪಯಿ ದಂಡ ವಿಧಿಸಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಮಾಹಿತಿ ನೀಡಿದ್ದಾರೆ.
0 comments:
Post a Comment