ಮಂಗಳೂರು, ಸೆಪ್ಟೆಂಬರ್ 04, 2025 (ಕರಾವಳಿ ಟೈಮ್ಸ್) : ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನೋತ್ಸವ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭವು ಸೆಪ್ಟೆಂಬರ್ 5 ರಂದು ಬೆಳಿಗ್ಗೆ 10 ಗಂಟೆಗೆ ಬೆಳ್ತಂಗಡಿ-ಸಂತೆಕಟ್ಟೆಯ ಶ್ರೀ ಧರ್ಮಸ್ಥಳ ಮಂಜುನಾಥಸ್ವಾಮಿ ಕಲಾಭವನ ಸಂತೆಕಟ್ಟೆಯಲ್ಲಿ ನಡೆಯಲಿದೆ.
2025 ನೇ ಸಾಲಿಗೆ ಕಿರಿಯ/ ಹಿರಿಯ/ ಪ್ರೌಢಶಾಲಾ ವಿಭಾಗಗಳಿಂದ 7 ತಾಲೂಕಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಿದ್ದಾರೆ.
2025-26ನೇ ಸಾಲಿನಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ : ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಮಂಗಳೂರು ಉತ್ತರ ವಲಯದ ಪಾಂಡೇಶ್ವರ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಶಾಲಿನಿ ಎಚ್ ಕೆ, ಮಂಗಳೂರು ದಕ್ಷಿಣ ತಿಪ್ಲೆಬೆಟ್ಟು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ವೀಣಾ ಮೇರಿ ರೇಗೋ, ಮೂಡಬಿದ್ರೆ ಮಾರ್ಪಾಡಿ-ನಡ್ಯೋಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಉಷಾಲತಾ ಹೆಗ್ಡೆ, ಬಂಟ್ವಾಳ ತಾಲೂಕು, ದೇವಸ್ಯಪಡೂರು ಕಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶಾಂತಿ ಲೀನಾ, ಬೆಳ್ತಂಗಡಿ ತಾಲೂಕು, ಸೂರ್ಯ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಜಯ ಕೆ, ಪುತ್ತೂರು ತಾಲೂಕು ಅರೆಲ್ತಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಜಗನ್ನಾಥ ಕೆ, ಸುಳ್ಯ ತಾಲೂಕು, ಬೆಂಡೋಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಲಲಿತ ಕುಮಾರಿ ಎಸ್ ಅವರು ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಮಂಗಳೂರು ಉತ್ತರ ವಲಯದ ಬೈಕಂಪಾಡಿ-ಮೀನಕಳಿಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಜಯಲಕ್ಷ್ಮಿ ಮಂಗಳೂರು ದಕ್ಷಿಣ ವಲಯದ ಉಚ್ಚಿಲ-ಸೋಮೇಶ್ವರ ಪಿ ಎಂ ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಚಂದ್ರಶೇಖರ ಸಿ ಎಚ್, ಮೂಡಬಿದ್ರೆ ನೆಲ್ಲಿಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಹರೀಶ ಕೆ ಎಂ, ಬಂಟ್ವಾಳ ತಾಲೂಕು, ಕೇಪು-ನೀರ್ಕಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಬಾಬು ನಾಯ್ಕ ಬಿ, ಬೆಳ್ತಂಗಡಿ ನಿಟ್ಟಡೆ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಆರತಿ ಕುಮಾರಿ, ಪುತ್ತೂರು ತಾಲೂಕು, ವೀರಮಂಗಳ-ಶಾಂತಿಗೋಡ ಪಿ ಎಂ ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ತಾರಾನಾಥ, ಸುಳ್ಯ ತಾಲೂಕು, ದೇವಚಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಶ್ರೀಧರ ಗೌಡ ಅವರಿಗೆ ಪ್ರಶಸ್ತಿ ಒಲಿದಿದೆ.
ಪ್ರೌಢಶಾಲಾ ವಿಭಾಗದಲ್ಲಿ ಮಂಗಳೂರು ಉತ್ತರ ವಲಯದ ಲೇಡಿಹಿಲ್ ವಿಕ್ಟೋರಿಯಾ ಪ್ರೌಢಶಾಲಾ ಶಿಕ್ಷಕಿ ವಿಲ್ಮಾ ಪಿ ಲೋಬೋ, ಮಂಗಳೂರು ದಕ್ಷಿಣ ವಲಯದ ಪೆರ್ಮನ್ನೂರು ಸರಕಾರಿ ಪ್ರೌಢಶಾಲಾ ಸಹ ಶಿಕ್ಷಕಿ ದುರ್ಗಾಲತಾ, ಮೂಡಬಿದ್ರೆ ತಾಲೂಕಿನ ಪ್ರಾಂತ್ಯ ಸರಕಾರಿ ಪ್ರೌಢಶಾಲಾ ಸಹಶಿಕ್ಷಕಿ ರತ್ನಾವತಿ ಆಚಾರ್ ಕೆ, ಬಂಟ್ವಾಳ ತಾಲೂಕು, ಸರಪಾಡಿ ಸರಕಾರಿ ಪ್ರೌಢಶಾಲಾ ಸಹ ಶಿಕ್ಷಕ ಆದಂ, ಬೆಳ್ತಂಗಡಿ ತಾಲೂಕಿನ ಪೆರ್ಲಬೈಪಾಡಿ ಸರಕಾರಿ ಪ್ರೌಢಶಾಲಾ ಶಿಕ್ಷಕ ವಿಜಯಕುಮಾರ್ ಎಂ, ಸುಳ್ಯ ತಾಲೂಕಿನ ಎಣ್ಮೂರು ಸರಕಾರಿ ಪ್ರೌಢಶಾಲಾ ಚಿತ್ರಕಲಾ ಶಿಕ್ಷಕ ಮೋಹನ ಎ ಅವರು ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
0 comments:
Post a Comment