ಬಂಟ್ವಾಳ, ಸೆಪ್ಟೆಂಬರ್ 14, 2025 (ಕರಾವಳಿ ಟೈಮ್ಸ್) : ಕೆ ಎನ್ ಆರ್ ಆರ್ ಸಂಸ್ಥೆಯವರು ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಹಿನ್ನಲೆಯಲ್ಲಿ ತಡೆಗೋಡೆ ನಿರ್ಮಾಣದ ಕೆಲಸಕ್ಕಾಗಿ ಗುತ್ತಿಗೆ ನೆಲೆಯಲ್ಲಿ ಪಡೆದುಕೊಂಡು ಉಪಯೋಗಿಸುತ್ತಿದ್ದ 2 ಜನರೇಟರ್ ಕಳವು ಆಗಿರುವ ಘಟನೆ ಪಾಣೆಮಂಗಳೂರು ಗ್ರಾಮದ ಬೋಳಂಗಡಿ ನರಹರಿ ಪರ್ವತ ಬಳಿ ಬೆಳಕಿಗೆ ಬಂದಿದೆ.
ಈ ಬಗ್ಗೆ ಪಾಣೆಮಂಗಳೂರು ನಿವಾಸಿ ಎಂ ಕೆ ಸಚಿನ್ (43) ಅವರು ಪೊಲೀಸರಿಗೆ ದೂರು ನೀಡಿದ್ದು, ಇವರು ಮಂಗಳೂರು ಪವರ್ ಸರ್ವಿಸ್ ಎಂಬ ಖಾಸಗಿ ಸಂಸ್ಥೆಯ ಮಾಲೀಕರಾಗಿದ್ದು, ಸುಮಾರು 4 ವರ್ಷಗಳಿಂದ ತನ್ನ ಸಂಸ್ಥೆಯಿಂದ ಕೆ ಎನ್ ಆರ್ ಕನ್ಸ್ಟ್‍ಕ್ಷನ್ ಲಿಮಿಟೆಡ್ ಸಂಸ್ಥೆಗೆ ಜನರೇಟರ್ ಗಳನ್ನು ಗುತ್ತಿಗೆ ನೆಲೆಯಲ್ಲಿ ಒದಗಿಸುತ್ತಿದ್ದಾರೆ. ಇವರು ನೀಡಿದ ಜನರೇಟರ್ ಗಳನ್ನು ಕೆ ಎನ್ ಆರ್ ಕನ್ಸ್ಟ್‍ಕ್ಷನ್ ಲಿಮಿಟೆಡ್ ಸಂಸ್ಥೆಯವರು ಪಾಣೆಮಂಗಳೂರು ಗ್ರಾಮದ ನರಹರಿ ಪರ್ವತದ ಬಳಿ ತಡೆಗೋಡೆ ನಿರ್ಮಾಣದ ಕೆಲಸ ಮಾಡುವ ಜಾಗದಲ್ಲಿ ಕೆಲಸಕ್ಕೆ ನಿಯೋಜಿಸಿದ್ದು, ಸದ್ರಿ ಜನರೇಟರ್ ಗಳನ್ನು ಪವರ್ ಸಂಸ್ಥೆಯ ಕೆಲಸದವರೇ ಅಪರೇಟರ್ ಮಾಡುತ್ತಿದ್ದರು. ಸೆ 11 ರಂದು ರಂದು ರಾತ್ರಿ 7.30 ಗಂಟೆಗೆ ಕೆಲಸ ಬಿಡುವ ಸಮಯ ಸಂಸ್ಥೆಯ ಕೆಲಸದಾಳು ರಾಜೇಶ್ ಅವರು ಜನರೇಟರ್ ಆಪರೇಟರ್ ಮುಕ್ತಾಯಗೊಳಿಸಿ ಹೋಗಿರುತ್ತಾರೆ. ಮರುದಿನ ಅಂದರೆ ಸೆ 12 ರಂದು ಬೆಳಿಗ್ಗೆ ಸದ್ರಿ ಸ್ಥಳದಲ್ಲಿ ಕೆಲಸವಿಲ್ಲದ ಕಾರಣ ಮದ್ಯಾಹ್ನ 2.30 ರ ವೇಳೆಗೆ ರಾಜೇಶ್ ಅವರು ಸದ್ರಿ ಸ್ಥಳಕ್ಕೆ ಹೋದಾಗ ಗುತ್ತಿಗೆ ನೆಲೆಯಲ್ಲಿ ನೀಡಿದ 2 ಜನರೇಟರ್ ಕರೆಂಟ್ ಉತ್ದಾದನಾ ಯಂತ್ರಗಳು ಕಾಣಿಸಲಿಲ್ಲ. ಈ ಬಗ್ಗೆ ಕೆ ಎನ್ ಆರ್ ಮುಖ್ಯಸ್ಥರಲ್ಲಿ ಹಾಗೂ ಸೈಟ್ ಇನ್ ಚಾರ್ಚ್ ಇಂಜಿನಿಯರ್ ಅವರಿಗೆ ಮಾಹಿತಿ ನೀಡಿ ಪರಿಶೀಲಿಸಿದಾಗ ಕರೆಂಟ್ ಯಂತ್ರಗಳು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಸಚಿನ್ ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment