ವನ್ಯಜೀವಿ ಸಪ್ತಾಹದ ಅಂಗವಾಗಿ ಅಕ್ಟೋಬರ್ 5 ರಂದು ಪಿಲಿಕುಳದಲ್ಲಿ ವಿವಿಧ ಸ್ಪರ್ಧೆಗಳು - Karavali Times ವನ್ಯಜೀವಿ ಸಪ್ತಾಹದ ಅಂಗವಾಗಿ ಅಕ್ಟೋಬರ್ 5 ರಂದು ಪಿಲಿಕುಳದಲ್ಲಿ ವಿವಿಧ ಸ್ಪರ್ಧೆಗಳು - Karavali Times

728x90

24 September 2025

ವನ್ಯಜೀವಿ ಸಪ್ತಾಹದ ಅಂಗವಾಗಿ ಅಕ್ಟೋಬರ್ 5 ರಂದು ಪಿಲಿಕುಳದಲ್ಲಿ ವಿವಿಧ ಸ್ಪರ್ಧೆಗಳು

ಮಂಗಳೂರು, ಸೆಪ್ಟೆಂಬರ್ 24, 2025 (ಕರಾವಳಿ ಟೈಮ್ಸ್) : ವನ್ಯಜೀವಿ ಸಪ್ತಾಹ-2025 ಅಂಗವಾಗಿ ಅಕ್ಟೋಬರ್ 5 ರಂದು ಪಿಲಿಕುಳದಲ್ಲಿ “ಪ್ರಕೃತಿ ಮತ್ತು ವನ್ಯಜೀವಿ” ವಿಷಯದಲ್ಲಿ ವಿವಿಧ  ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. 

ಕಿರಿಯ ಹಾಗೂ ಹಿರಿಯ ಪ್ರಾಥಮಿಕ, ಪ್ರೌಢಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆ (ವಿಷಯ : “ಪ್ರಕೃತಿ ಮತ್ತು ವನ್ಯಜೀವಿ”) ಪ್ರತೀ ಸ್ಪರ್ಧಿಗಳು ಮುಂಚಿತವಾಗಿ ನೋಂದಣಿ ಮಾಡಬೇಕು. ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ವಿದ್ಯಾರ್ಥಿಗಳು ಬೇಕಾದ ಸಾಮಾಗ್ರಿಗಳನ್ನು (ಬಣ್ಣಗಳು, ಕ್ರಯಾನ್ಸ್) ತಾವೇ ತರಬೇಕು. ಹಾಳೆಯನ್ನು ಸ್ಥಳದಲ್ಲೇ ನೀಡಲಾಗುತ್ತದೆ. 2 ಗಂಟೆಗಳ ಸಮಯಾವಕಾಶ ನೀಡಲಾಗುತ್ತದೆ.

ಛದ್ಮವೇಶ ಸ್ಪರ್ಧೆ (ವಿಷಯ : “ಪ್ರಕೃತಿ ಮತ್ತು ವನ್ಯಜೀವಿ”) ಸ್ಪರ್ಧಾರ್ಥಿಗಳು ಮುಂಚಿತವಾಗಿ ನೋಂದಣಿ ಮಾಡಬೇಕು. 1-3 ನಿಮಿಷಗಳವರೆಗೆ ವೇದಿಕೆಯ ಮೇಲೆ ತಮ್ಮ ಪಾತ್ರವನ್ನು ಪ್ರದರ್ಶಿಸಲು ಅವಕಾಶ ನೀಡಲಾಗುವುದು. ಸ್ಪರ್ಧಿಗಳು ಪಾತ್ರಕ್ಕೆ ತಕ್ಕಂತೆ ಸ್ವಲ್ಪ ಮಾತುಕತೆ ಅಥವಾ ನಾಟಕೀಯ ಸಂಭಾಷಣೆಯನ್ನು ಹೇಳಬಹುದು. ಮನೆಯಲ್ಲಿ ಮಾಡಿದ ವೇಷಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಸಂಗೀತ ಬಳಕೆಗಾಗಿ ಮುಂಚಿತವಾಗಿ ಮಾಹಿತಿ ನೀಡಬೇಕು.

ಈ ಬಗ್ಗೆ ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 0824-2263300, 7975495794 ಅಥವಾ ವೆಬ್‍ಸೈಟ್ www.pilikulazoo.com ಅಥವಾ ಇಮೇಲ್ pilikulaoutreach@gmail.com  ಸಂಪರ್ಕಿಸಬಹುದು  ಎಂದು ಪಿಲಿಕುಳ ಜೈವಿಕ ಉದ್ಯಾನವನ ನಿರ್ದೇಶಕರ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ವನ್ಯಜೀವಿ ಸಪ್ತಾಹದ ಅಂಗವಾಗಿ ಅಕ್ಟೋಬರ್ 5 ರಂದು ಪಿಲಿಕುಳದಲ್ಲಿ ವಿವಿಧ ಸ್ಪರ್ಧೆಗಳು Rating: 5 Reviewed By: karavali Times
Scroll to Top