ಬಂಟ್ವಾಳ, ಅಕ್ಟೋಬರ್ 09, 2025 (ಕರಾವಳಿ ಟೈಮ್ಸ್) : ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರರಿಬ್ಬರು ಗಾಯಗೊಂಡ ಘಟನೆ ವಿಟ್ಲ ಕಸಬಾ ಗರಾಮದ ಉಕ್ಕುಡ ಜಂಕ್ಷನ್ನಿನಲ್ಲಿ ಅ 7 ರಂದು ಸಂಜೆ ಸಂಭವಿಸಿದೆ.
ಗಾಯಗೊಂಡ ಸ್ಕೂಟರ್ ಸವಾರನನ್ನು ಕೇಪು ಗ್ರಾಮದ ನೆಕ್ಕರೆ ನಿವಾಸಿ ಕೃಷ್ಣ ಮೂಲ್ಯ (52) ಹಾಗೂ ಸಹಸವಾರ ಬಾಬು ಕುಲಾಲ್ ಎಂದು ಹೆಸರಿಸಲಾಗಿದೆ. ಕೃಷ್ಣ ಮೂಲ್ಯ ಅವರು ಅ 7 ರಂದು ತನ್ನ ಸ್ಕೂಟರಿನಲ್ಲಿ ಬಾಬು ಕುಲಾಲ್ ಅವರನ್ನು ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು ಕಂಬಳಬೆಟ್ಟುವಿನಿಂದ ನೆಕ್ಕರೆ ಕಡೆಗೆ ವಿಟ್ಲ-ಕಾಂಞಂಗಾಡ್ ಅಂತರಾಜ್ಯ ಹೆದ್ದಾರಿಯಲ್ಲಿ ಹೋಗುತ್ತಿದ್ದ ವೇಳೆ ಸಂಜೆ ಸುಮಾರು 5.45ರ ವೇಳೆಗೆ ಉಕ್ಕುಡ ಜಂಕ್ಷನ್ ತಲುಪಿದಾಗ ಕನ್ಯಾನ ಕಡೆಯಿಂದ ದಯಾನಂದ ಎಂಬವರು ಚಲಾಯಿಸಿಕೊಂಡು ಬಂದ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಸ್ಕೂಟರ್ ಸಮೇತ ರಸ್ತೆಗೆ ಬಿದ್ದ ಸವಾರರು ಗಾಯಗೊಂಡಿದ್ದಾರೆ. ತಕ್ಷಣ ಸ್ಥಳೀಯರು ಗಾಯಾಳುಗಳನ್ನು ವಿಟ್ಲ ಸರಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಮಹಾವೀರ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment