ಮಂಗಳೂರು, ಅಕ್ಟೋಬರ್ 10, 2025 (ಕರಾವಳಿ ಟೈಮ್ಸ್) : ನಿಷೇಧಿತ ಪಿ ಎಫ್ ಐ ಸಂಘಟನೆಯ ಪರವಾಗಿ ವಾಟ್ಸಪ್ ಗ್ರೂಪಿನಲ್ಲಿ ಸ್ವಯಂಪ್ರೇರಿತ ಪ್ರಚಾರ ಮಾಡಿದ ಆರೋಪದಲ್ಲಿ ಆರೋಪಿತ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕಡಬ ತಾಲೂಕಿನ ಉಪ್ಪಿನಂಡಿ ಸಮೀಪದ ರಾಮಕುಂಜ ಗ್ರಾಮದ ಬೀಜಾತಳಿ ನಿವಾಸಿ ದಿವಂಗತ ಸಯ್ಯದ್ ಹಸನ್ ತಂಙಳ್ ಎಂಬವರ ಪುತ್ರ ಸೆಯ್ಯದ್ ಇಬ್ರಾಹಿಂ ತಂಙಳ್ (55) ಎಂದು ಹೆಸರಿಸಲಾಗಿದೆ.
2022 ರ ಸೆಪ್ಟೆಂಬರ್ 28 ರಂದು ಕೇಂದ್ರ ಸರಕಾರದಿಂದ ನಿಷೇಧಕ್ಕೊಳಗಾಗಿ ಕಾನೂನು ಬಾಹಿರ ಸಂಘಟನೆಯೆಂದು ಘೋಷಿತವಾಗಿರುವ ಪಿ ಎಫ್ ಐ ಸಂಘಟನೆಯ ಪರವಾಗಿ ಆರೋಪಿ ಅ 9 ರಂದು ಸಾಮಾಜಿಕ ಜಾಲ ತಾಣವಾದ ವಾಟ್ಸಪ್ ಗ್ರೂಪಿನಲ್ಲಿ ಪೆÇೀಸ್ಟ್ ಪ್ರಕಟಿಸಿ, ಸದ್ರಿ ಸಂಘಟನೆಯ ಬಗ್ಗೆ ಸ್ವಯಂ ಪ್ರೇರಿತನಾಗಿ ಪ್ರಚಾರ ಮಾಡಿ ಅಪರಾಧಿಕ ಬಲ ಪ್ರದರ್ಶನದ ಮೂಲಕ ಆತಂಕ ಉಂಟು ಮಾಡಿದ ಕೃತ್ಯವೆಸಗಿದ್ದಾರೆ ಎಂದು ಪಿಎಸ್ಸೈ ಅವರು ಸಲ್ಲಿಸಿದ ದೂರಿನಂತೆ ಮಂಗಳೂರು ಉತ್ತರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 113/2025 ಕಲಂ 10(ಎ)(1), 13, 18 ಯುಎಪಿಎ ಆಕ್ಟ್ ಪ್ರಕಾರ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಅ 9 ರಂದು ಆರೋಪಿಯನ್ನು ಮಂಗಳೂರು ನಗರದ ಉರ್ವ ಸ್ಟೋರ್ ಬಳಿಯಿಂದ ವಶಕ್ಕೆ ಪಡೆದು ದಸ್ತಗಿರಿ ಮಾಡಿದ್ದು, ಆತನ ವಶದಲ್ಲಿದ್ದ ಮೊಬೈಲ್ ಫೆÇೀನ್ ಅಮಾನತ್ತು ಪಡಿಸಿಕೊಂಡು ತನಿಖೆಗೆ ಒಳಪಡಸಿದ್ದಾರೆ. ಅ 10 ರಂದು ಆರೋಪಿಯನ್ನು 49ನೇ ಹೆಚ್ಚುವರಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ (ಸಿಸಿಎಚ್-50) ಮತ್ತು ಎನ್ ಐ ಎ ಪ್ರಕರಣಗಳ ವಿಶೇಷ ನ್ಯಾಯಾಲಯ ಬೆಂಗಳೂರು ಇಲ್ಲಿಗೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಯನ್ನು ಅ 24ರವರೆಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ.
0 comments:
Post a Comment