ಬಂಟ್ವಾಳ, ಅಕ್ಟೋಬರ್ 10, 2025 (ಕರಾವಳಿ ಟೈಮ್ಸ್) : ಇನ್ಸ್ಟಾಗ್ರಾಮಿನಲ್ಲಿ ಪ್ರಚೋದನಕಾರಿ ಸಂದೇಶ ರವಾನಿಸಿದ ವ್ಯಕ್ತಿಯ ವಿರುದ್ದ ಪೂಂಜಾಲಕಟ್ಟೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೂಂಜಾಲಕಟ್ಟೆ ಪಿಎಸ್ಸೈ ರಾಜೇಶ್ ಕೆ ವಿ ಅವರು ಅ 9 ರಂದು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನೋಡುತ್ತಿರುವಾಗ ಆರ್ಥಾ_ಫಾಕ್ಸ್ ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯನ್ನು ಹೊಂದಿರುವ ವ್ಯಕ್ತಿಯು ತನ್ನ ಖಾತೆಯಲ್ಲಿ ಜಾತಿಯ ಅಥವಾ ಸಮುದಾಯಗಳ ನಡುವೆ ಪ್ರಚೋದಿಸುವ, ವೈಮನಸ್ಸು ಉಂಟಾಗುವಂತೆ ಹಾಗೂ ಸಂಘರ್ಷ ಉಂಟು ಮಾಡುವ ಉದ್ದೇಶವನ್ನು ಹೊಂದಿ ತನ್ನ ಖಾತೆಯಿಂದ ಪೋಸ್ಟ್ ಮಾಡಿರುವುದು ಕಂಡು ಬಂದಿದೆ. ಈತ ಮಾಡಿದ ಪ್ರಸಾರದಿಂದ ಉದ್ದೇಶ ಪೂರ್ವಕವಾಗಿ ಒಂದು ವರ್ಗವನ್ನು ಅಥವಾ ಸಮುದಾಯವನ್ನು ಪ್ರಚೋದಿಸುವ ಪೋಸ್ಟರ್ ಆಗಿರುವುದಾಗಿದೆ. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment