ಅನ್ನಭಾಗ್ಯದ ಜೊತೆ ಇಂದಿರಾ ಕಿಟ್ ನೀಡಲಿರುವ ರಾಜ್ಯ ಸರಕಾರ : ಬಡವರಿಗೆ ನೆಮ್ಮದಿಯ ಬದುಕು ಎಂದ ಶಾಸಕ ಅಶೋಕ್ ರೈ - Karavali Times ಅನ್ನಭಾಗ್ಯದ ಜೊತೆ ಇಂದಿರಾ ಕಿಟ್ ನೀಡಲಿರುವ ರಾಜ್ಯ ಸರಕಾರ : ಬಡವರಿಗೆ ನೆಮ್ಮದಿಯ ಬದುಕು ಎಂದ ಶಾಸಕ ಅಶೋಕ್ ರೈ - Karavali Times

728x90

9 October 2025

ಅನ್ನಭಾಗ್ಯದ ಜೊತೆ ಇಂದಿರಾ ಕಿಟ್ ನೀಡಲಿರುವ ರಾಜ್ಯ ಸರಕಾರ : ಬಡವರಿಗೆ ನೆಮ್ಮದಿಯ ಬದುಕು ಎಂದ ಶಾಸಕ ಅಶೋಕ್ ರೈ

ಪುತ್ತೂರು, ಅಕ್ಟೋಬರ್ 09, 2025 (ಕರಾವಳಿ ಟೈಮ್ಸ್) : ಕರ್ನಾಟಕ ಸರಕಾರ ಅನ್ನಭಾಗ್ಯ ಯೋಜನೆಯಡಿ ಇಂದಿರಾ ಕಿಟ್ ನೀಡಲು ಸಂಪುಟ ಸಮಿತಿ ಸಭೆಯಲ್ಲಿ ನಿರ್ಧಾರವಾಗಿದ್ದು ಈ ನಿರ್ಧಾರ ಅತ್ಯಂತ ಪ್ರಯೋಜನಕಾರಿಯಾಗಿದ್ದು ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಬಡವರಿಗೆ ನೆಮ್ಮದಿಯ ಬದುಕು ನೀಡಲಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದ್ದಾರೆ. 

ಅನ್ನಭಾಗ್ಯ ಯೋಜನೆಯಡಿ 10 ಕೆ ಜಿ ಅಕ್ಕಿಯನ್ನು ನೀಡುತ್ತಿರುವ ಕಾರಣ ಅಕ್ಕಿ ಕಾಳಸಂತೆಯಲ್ಲೂ ಮಾರಾಟವಾಗುತ್ತಿದೆ, ಮತ್ತು ಹೆಚ್ಚು ನೀಡುತ್ತಿರುವ ಕಾರಣ ಇದನ್ನು ಬೇಕಾ ಬಿಟ್ಟಿ ಬಳಕೆಯಾಗುತ್ತಿದೆ ಎಂಬ ವಿಚಾರ ಸರಕಾರದ ಗಮನಕ್ಕೆ ಬಂದಿರುವ ಕಾರಣ ಹತ್ತು ಕೆ ಜಿ ಅಕ್ಕಿಯನ್ನು 5 ಕೆ ಜಿ ಇಳಿಸಲು ಸರಕಾರ ನಿರ್ಧರಿಸಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು 5 ಕೆ ಜಿ ಅಕ್ಕಿಯ ಬದಲಾಗಿ ಇಂದಿರಾ ಕಿಟ್ ನೀಡಲು ಸರಕಾರ ತೀರ್ಮಾನವನ್ನು ಕೈಗೊಂಡಿರುವುದು ಅತ್ಯುತ್ತಮ ಕಾರ್ಯವಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.

ಕರ್ನಾಟಕ ಸರಕಾರ ನೀಡಲಿರುವ ಇಂದಿರಾ ಕಿಟ್ ನಲ್ಲಿ 2 ಕೆ ಜಿ ತೊಗರಿ ಬೇಳೆ, 1 ಲೀಟರ್ ಅಡುಗೆ ಎಣ್ಣೆ, 1 ಕೆಜಿ ಸಕ್ಕರೆ, ಮತ್ತು 1 ಕಿಲೋ ಉಪ್ಪು ದೊರೆಯಲಿದೆ.

ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನತೆಗೆ ಈ ಕಿಟ್ ಹೊಸ ಆಶಾಭಾವನೆಯನ್ನು ಮೂಡಿಸಿದ್ದು ಮುಂದಿನ ದಿನಗಳಲ್ಲಿ ಬಡವರಿಗೆ ಇದರಿಂದ ತುಂಬಾ ಪ್ರಯೋಜನವಾಗಲಿದ್ದು ಇದು ಕರ್ನಾಟಕದ ಕಾಂಗ್ರೆಸ್ ಸರಕಾರದ ಕೊಡುಗೆಯಾಗಿದ್ದು, ಕಾಂಗ್ರೆಸ್ ಎಂದೆಂದೂ ಬಡವರ ಪರ ಎಂಬುದು ಸಾಬೀತಾಗಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಅನ್ನಭಾಗ್ಯದ ಜೊತೆ ಇಂದಿರಾ ಕಿಟ್ ನೀಡಲಿರುವ ರಾಜ್ಯ ಸರಕಾರ : ಬಡವರಿಗೆ ನೆಮ್ಮದಿಯ ಬದುಕು ಎಂದ ಶಾಸಕ ಅಶೋಕ್ ರೈ Rating: 5 Reviewed By: karavali Times
Scroll to Top