ಬಂಟ್ವಾಳ, ಅಕ್ಟೋಬರ್ 09, 2025 (ಕರಾವಳಿ ಟೈಮ್ಸ್) : ಲಾರಿ ಡಿಕ್ಕಿ ಹೊಡೆದು ಸ್ಕೂಟರ್ ಸವಾರರಿಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಸಜಿಪಮೂಡ ಗ್ರಾಮದ ನಗ್ರಿ ಎಂಬಲ್ಲಿ ಅ 7 ರಂದು ಸಂಜೆ ಸಂಭವಿಸಿದೆ.
ಸಜಿಪನಡು ಗ್ರಾಮದ ಕಂಚಿನಡ್ಕ ನಿವಾಸಿ ಅನ್ಸಾರಿ (37) ಎಂಬವರು ಅ 7 ರಂದು ತನ್ನ ಲಾರಿಯಲ್ಲಿ ಕುಕ್ಕಾಜೆ ಕಡೆಯಿಂದ ಮಾರ್ನಬೈಲು-ಸಾಲೆತ್ತೂರು ರಾಜ್ಯ ಹೆದ್ದಾರಿಯಲ್ಲಿ ಮೆಲ್ಕಾರ್ ಕಡೆಗೆ ಬರುತ್ತಿರುವಾಗ ಸಂಜೆ 3.15ರ ವೇಳೆಗೆ ಸಜಿಪಮೂಡ ಗ್ರಾಮದ ನಗ್ರಿ ಎಂಬಲ್ಲಿ ಎದುರುಗಡೆಯಿಂದ ಅಂದರೆ ಮಾರ್ನಬೈಲು ಕಡೆಯಿಂದ ಸಾಲೆತ್ತೂರು ಕಡೆಗೆ ಸಹಸವಾರಿಣಿಯನ್ನು ಕುಳ್ಳಿರಿಸಿಕೊಂಡು ಬಂದ ಸ್ಕೂಟರ್ ಸವಾರ ರಸ್ತೆಯ ತೀರಾ ಬಲಬದಿಗೆ ಬಂದಿದ್ದಾನೆ. ಅಪಾಯ ಅರಿತ ಲಾರಿ ಚಾಲಕ ಲಾರಿಯನ್ನು ನಿಲ್ಲಿಸಿ ಹಾರ್ನ್ ಹಾಕಿದರೂ ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದ ಸ್ಕೂಟರ್ ಚಾಲಕ ಲಾರಿಯ ಎದುರಿನ ಬಲಗಡೆಯ ಬಂಪರ್ ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಘಟನೆಯಿಂದ ಸವಾರ ಹಾಗೂ ಸಹಸವಾರಿಣಿ ಸ್ಕೂಟರ್ ಸಮೇತ ರಸ್ತೆಗೆ ಎಸಯಲ್ಪಟ್ಟು ಗಾಯಗೊಂಡಿದ್ದಾರೆ. ತಕ್ಷಣ ಲಾರಿ ಚಾಲಕ ಹಾಗೂ ಲಾರಿಯಲ್ಲಿದ್ದ ಶಾಹಿದ್ ಎಂಬವರು ಸ್ಥಳೀಯ ಸಾರ್ವಜನಿಕರ ಸಹಕಾರದಿಂದ ಗಾಯಾಳುಗಳನ್ನು ರಿಕ್ಷಾವೊಂದರಲ್ಲಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆ ಸಾಗಿಸಲಾಗಿದೆ. ಅಲ್ಲಿನ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಕಳಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment