ಬಂಟ್ವಾಳ, ಅಕ್ಟೋಬರ್ 10, 2025 (ಕರಾವಳಿ ಟೈಮ್ಸ್) : ಮತಕಳ್ಳತನದ ವಿರುದ್ದ ರಾಹುಲ್ ಗಾಂಧಿ ಅವರು ದೇಶಾದ್ಯಂತ ಹಮ್ಮಿಕೊಂಡಿರುವ ಜನಜಾಗೃತಿ ಬೆಂಬಲಿಸಿ ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ವತಿಯಿಂದ ಬೃಹತ್ ಪಂಜಿನ ಮೆರವಣಿಗೆ ಇಂದು (ಅಕ್ಟೋಬರ್ 10 ಶುಕ್ರವಾರ) ಸಂಜೆ 6 ಗಂಟೆಗೆ ಬಿ ಸಿ ರೋಡು-ಕೈಕಂಬ ಪೊಳಲಿ ದ್ವಾರದಿಂದ ಮಿನಿ ವಿಧಾನಸೌಧ ವರೆಗೆ ನಡೆಯಲಿದೆ. ಬಳಿಕ ಮಿನಿ ವಿಧಾನಸೌಧ ಮುಂಭಾಗ ನಡೆಯುವ ಸಭಾ ಕಾರ್ಯಕ್ರಮದಲ್ಲಿ ರಾಜ್ಯದ ಕಾರ್ಮಿಕ ಇಲಾಖಾ ಮಂತ್ರಿ ಸಂತೋಷ್ ಲಾಡ್ ಅವರು ಭಾಗವಹಿಸಲಿದ್ದು, ಸಾರ್ವಜನಿಕರನ್ನುದ್ದೇಶಿಸಿ ಮುಖ್ಯ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಸಾರ್ವಜನಿಕ ಮತದಾರ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೆಪಿಸಿಸಿ ಉಪಾಧ್ಯಕ್ಷರೂ ಆಗಿರುವ ಬಿ ರಮಾನಾಥ ರೈ ಅವರು ಕರೆ ನೀಡಿದ್ದಾರೆ.
9 October 2025
- Blogger Comments
- Facebook Comments
Subscribe to:
Post Comments (Atom)
0 comments:
Post a Comment