ಬಂಟ್ವಾಳ, ಅಕ್ಟೋಬರ್ 08, 2025 (ಕರಾವಳಿ ಟೈಮ್ಸ್) : ಕಳೆದ ಮೂರು ವರ್ಷಗಳಿಂದ ಕಿಡ್ನಿ ವೈಫಲ್ಯಗೊಂಡು ಅನಾರೋಗ್ಯದಲ್ಲಿರುವ ಹಿರಿಯ ಪತ್ರಕರ್ತ, ರಂಗನಿರ್ದೇಶಕ ಆಲದಪದವು ಗೋಪಾಲ ಅಂಚನ್ ಅವರ ವೈದ್ಯಕೀಯ ಚಿಕಿತ್ಸೆಗೆ ಕೋಳ್ನಾಡು-ಸಾಲೆತ್ತೂರು ಲಯನ್ಸ್ ಕ್ಲಬ್ ವತಿಯಿಂದ ಆರ್ಥಿಕ ನೆರವು ನೀಡಲಾಯಿತು.
ಲಯನ್ಸ್ ಕ್ಲಬ್ ಅಧ್ಯಕ್ಷ ಉಮನಾಥ ರೈ ಮೇರಾವು ಅವರು ಶ್ರೀಮತಿ ಪ್ರತಿಮ ಗೋಪಾಲ ಅಂಚನ್ ಅವರಿಗೆ ಸಹಾಯಧನ ಹಸ್ತಾಂತರಿಸಿದರು. ಈ ಸಂದರ್ಭ ಲಯನ್ಸ್ ಕ್ಲಬ್ ಪ್ರಮುಖರಾದ ಡಾ ಗೋಪಾಲ ಆಚಾರ್, ಜಯಪ್ರಕಾಶ್ ರೈ, ರಾಮಪ್ರಸಾದ್ ರೈ, ದಿವಾಕರ ಶೆಟ್ಟಿ ಮೊದಲಾದವರಿದ್ದರು.













0 comments:
Post a Comment