ಕಡಬ, ನವೆಂಬರ್ 08, 2025 (ಕರಾವಳಿ ಟೈಮ್ಸ್) : 9ನೇ ತರಗತಿಯಲ್ಲಿ ಕಲಿಯುತ್ತಿದ್ದ 14 ವರ್ಷದ ಬಾಲಕನೋರ್ವ ಮನೆಯ ಕೋಣೆಯಲ್ಲಿ ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡ ಘಟನೆ ಕಡಬದಲ್ಲಿ ನ 6 ರಂದು ಸಂಭವಿಸಿದೆ.
ವಿದ್ಯಾರ್ಥಿಯ ಹೆತ್ತವರು ನ 6 ರಂದು ಮಕ್ಕಳ ವಿದ್ಯಾಬ್ಯಾಸದ ಪ್ರಗತಿಯನ್ನು ನೋಡಲು ಶಾಲೆಗೆ ಭೇಟಿ ನೀಡಿದ್ದಾಗ, ಮಗನ ಕಲಿಕಾ ಪ್ರಗತಿ ಉತ್ತಮವಾಗಿಲ್ಲವೆಂದು ತಿಳಿದುಬಂದಿರುತ್ತದೆ. ಅದೇ ದಿನ ಸಂಜೆ ಶಾಲೆಯಿಂದ ಮನೆಗೆ ಮರಳಿದ ಬಾಲಕ ಆಟವಾಡಲು ಹೋಗಿ ಬಳಿಕ ಮನೆಗೆ ಮರಳಿ ಬಂದು ರೂಮಿಗೆ ತೆರಳಿ ಬಾಗಿಲು ಹಾಕಿರುತ್ತಾನೆ. ಸ್ವಲ್ಪ ಸಮಯದ ಬಳಿಕ ಬಾಗಿಲು ತೆರೆಯದಿರುವುದನ್ನು ಗಮನಿಸಿದ ಹೆತ್ತವರು ಬಾಗಿಲನ್ನು ಬಲತ್ಕಾರವಾಗಿ ತೆಗೆದಾಗ ಬಾಲಕನು ರೂಮಿನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದಾನೆ. ತಕ್ಷಣ ಆತನನ್ನು ಕಡಬ ಸರಕಾರಿ ಆಸ್ಪತ್ರೆಗೆ ಕರೆ ತಂದಾಗ ವೈದ್ಯಾದಿಕಾರಿಯವರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಕಡಬ ಪೆÇಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.















0 comments:
Post a Comment