ಮಂಗಳೂರು, ನವೆಂಬರ್ 14, 2025 (ಕರಾವಳಿ ಟೈಮ್ಸ್) : ಬಜಪೆ ಪಟ್ಟಣ ಪಂಚಾಯತ್ ಸಾರ್ವತ್ರಿಕ ಚುನಾವಣೆ-2025 ರ ಸಂಬಂಧ ಚುನಾವಣೆಯನ್ನು ನಡೆಸಲು ಅಂತಿಮ ಮತದಾರರ ಪಟ್ಟಿಯನ್ನು ನವೆಂಬರ್ 13 ರಂದು ಮಂಗಳೂರು ತಾಲೂಕು ಕಚೇರಿ, ಬಜಪೆ ಪಟ್ಟಣ ಪಂಚಾಯತ್, ಸುರತ್ಕಲ್ ನಾಡಕಛೇರಿ, ಸುರತ್ಕಲ್ ಕಂದಾಯ ನಿರೀಕ್ಷಕರ ಕಛೇರಿ, ಗ್ರಾಮ ಆಡಳಿತ ಅಧಿಕಾರಿ ಇಲ್ಲಿಯ ನೋಟೀಸು ಫಲಕದಲ್ಲಿ ಪ್ರಕಟಿಸಲಾಗಿದೆ.
19 ವಾರ್ಡುಗಳ ಮತದಾರರ ಪಟ್ಟಿಯನ್ನು ಜಿಲ್ಲಾ ವೆಬ್ ಸೈಟಿನಲ್ಲಿ ಪ್ರಕಟಿಸಲಾಗಿದ್ದು ಸಾರ್ವಜನಿಕರು ವೀಕ್ಷಿಸಬಹುದು ಎಂದು ಮಂಗಳೂರು ತಹಶೀಲ್ದಾರ್ ತಿಳಿಸಿದ್ದಾರೆ.













0 comments:
Post a Comment