ಬಂಟ್ವಾಳ, ನವೆಂಬರ್ 24, 2025 (ಕರಾವಳಿ ಟೈಮ್ಸ್) : ಬೈಕ್ ಸ್ಕಿಡ್ ಆಗಿ ಬಿದ್ದು ಸವಾರ ಗಾಯಗೊಂಡ ಘಟನೆ ಬಾಳ್ತಿಲ ಗ್ರಾಮದ ನೀರಪಾದೆ ಸಮೀಪದ ಸಣ್ಣಕುಕ್ಕು ಎಂಬಲ್ಲಿ ನ 21 ರಂದು ರಾತ್ರಿ ವೇಳೆ ಸಂಭವಿಸಿದೆ.
ಗಾಯಗೊಂಡ ಬೈಕ್ ಸವಾರನನ್ನು ಯಶವಂತ ಕೆ ಎಂದು ಹೆಸರಿಸಲಾಗಿದೆ. ಇವರು ನ 21 ರಂದು ರಾತ್ರಿ 9.15ರ ವೇಳೆಗೆ ಶಂಭೂರು ಕಡೆಯಿಂದ ದಾಸಕೋಡಿ ಕಡೆಗೆ ಪಾಣೆಮಂಗಳೂರು-ದಾಸಕೋಡಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ಸಣ್ಣಕುಕ್ಕು ಎಂಬಲ್ಲಿ ಬೈಕ್ ಸ್ಕಿಡ್ ಆಗಿ ನಿಯಂತ್ರಣ ಮೀರಿ ಬೈಕ್ ಸಮೇತ ರಸ್ತೆಗೆ ಬಿದ್ದು ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ಯಶವಂತ್ ಅವರ ತಲೆ ಹಾಗೂ ಮುಖಕ್ಕೆ ಗಾಯಗಳಾಗಿದ್ದು, ತಕ್ಷಣ ಅವರನ್ನು ಶಿವರಾಜ್ ಹಾಗೂ ಕಸ್ತೂರಿ ಜೈನ್ ಎಂಬವರುಗಳು ಶರೀಫ್ ಎಂಬವರ ಅಟೋ ರಿಕ್ಷಾದಲ್ಲಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅಂಬ್ಯುಲೆನ್ಸ್ ಮೂಲಕ ಮಂಗಳೂರಿನ ಎ ಜೆ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿ ನ್ಯೂರಾಲಜಿಸ್ಟ್ ತಜ್ಞರಿಲ್ಲದ ಕಾರಣ ಅಲ್ಲಿಂದ ಪಡೀಲ್ ಫಸ್ಟ್ ನ್ಯೂರೋ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಶಿವರಾಜ್ ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment