ಮಂಗಳೂರು, ನವೆಂಬರ್ 05, 2025 (ಕರಾವಳಿ ಟೈಮ್ಸ್) : ಜಿಲ್ಲೆಯ ಸಂಘರ್ಷಮಯ ವಾತಾವರಣಕ್ಕೆ ತಮ್ಮ ಮುಲಾಜಿಲ್ಲದ ಕಾರ್ಯನಿರ್ವಹಣೆ ಹಾಗೂ ರಾಜಕೀಯ ರಾಜಿ ರಹಿತ ನಿಲುವಿನಿಂದ ಜನರಿಗೆ ನೆಮ್ಮದಿಯ ಜೀವನ ನೀಡಲು ಶತ ಪ್ರಯತ್ನ ನಡೆಸುತ್ತಿರುವ ಮಂಗಳೂರು ಪೊಲೀಸ್ ಕಮಿಷನರ್ ಅವರನ್ನೇ ಸೈಬರ್ ಖದೀಮರು ಯಾಮಾರಿಸಲು ಹೊರಟಿದ್ದಾರೆ ಎನ್ನುವುದು ಇದೀಗ ಜಿಲ್ಲೆಯಲ್ಲಿ ಬಹುಚರ್ಚಿತ ವಿಷಯ.
ಪೊಲೀಸ್ ಅಧಿಕಾರಿಯ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿರು ಖದೀಮರು ಕೆಲವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಸ್ವೀಕಾರವನ್ನೂ ಮಾಡಲಾಗಿದೆ. ಖಾತೆಯಲ್ಲಿ ಈಗಾಗಲೇ 9 ಮಂದಿ ಫ್ರೆಂಡ್ ಆಗಿ ಸೇರಿಕೊಂಡಿದ್ದಾರೆ. ಖದೀಮರು ಜನರನ್ನು ಯಾಮಾರಿಸುವ ಮುಂಚೆಯೇ ಕಮಿಷನರ್ ರೆಡ್ಡಿ ಅವರ ಗಮನಕ್ಕೆ ವಿಷಯ ಗೊತ್ತಾಗಿದ್ದು, ಖಾತೆಯನ್ನು ರಿಪೋರ್ಟ್ ಮಾಡಿಕೊಂಡಿದ್ದಾರಲ್ಲದೆ ಈ ಬಗ್ಗೆ ಅವರು ಮಾಧ್ಯಮ ಮಂದಿಯ ಗಮನಕ್ಕೆ ತಂದು ಜನ ಯಾಮಾರಿಕೊಳ್ಳದಂತೆ ಎಚ್ಚರಿಸಿದ್ದಾರೆ.
https://www.facebook.com/share/17gu8Y13vK/ ಎಂಬ ಖಾತೆ ಸೃಷ್ಟಿಸಿ ಅದರಲ್ಲಿ 'Sudheer Kumar Reddy locked "her" profile'. ಎಂದು ಬರೆದುಕೊಳ್ಳುವ ಮೂಲಕ ನಕಲಿ ಖಾತೆಯ ಪ್ರೊಫೈಲ್ ಬ್ಲಾಕ್ ಮಾಡಿಕೊಂಡಿರುವ ಖದೀಮರು ಕಮಿಷನರ್ ರೆಡ್ಡಿ ಅವರನ್ನು ತಮ್ಮ ಪ್ರೊಫೈಲ್ ವಿವರದಲ್ಲಿ "ಅವಳು" ಎಂದು ನಮೂದಿಸಿದ್ದು, ರೆಡ್ಡಿ ಅವರು ಹೆಣ್ಣೋ ಗಂಡೋ ಎಂಬುದನ್ನೂ ತಿಳಿದುಕೊಳ್ಳಲು ವಿಫಲರಾಗಿದ್ದಾರೆ ಎಂದು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಮಾಹಿತಿ ಹಂಚಿಕೊಂಡಿದ್ದಾರೆ.
ಸದ್ಯ ನಕಲಿ ಖಾತೆ ಸೃಷ್ಟಿಸಿದಾತನ ಪತ್ತೆ ಹಚ್ಚಿ ಬಂಧಿಸಲು ನಗರ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಸೈಬರ್ ಠಾಣೆಗಳು ಹೆಚ್ಚಿನ ಬಲ ಪಡೆದುಕೊಂಡಿರುವ ಇಂದಿನ ಕಾಲದಲ್ಲಿ ರೆಡ್ಡಿ ಅವರಂತಹ ಹಿರಿಯ ಹಾಗೂ ಖಡಕ್ ಆಫೀಸರ್ ಗಳನ್ನೇ ಯಾಮಾರಿಸುವ ಪ್ರಯತ್ನ ನಡೆಸುವ ಖದೀಮರಿಗೆ ಜನಸಾಮಾನ್ಯರು ಯಾವ ಲೆಕ್ಕ ಎಂಬ ಅಭಿಪ್ರಾಯ ಸಮಾಜದಲ್ಲಿ ಮೂಡಿದ್ದು ಜನ ಬಹಳಷ್ಟು ಜಾಗರೂಕತೆಯಿಂದ ಸೋಶಿಯಲ್ ಮೀಡಿಯಾ ನಿರ್ವಹಿಸಬೇಕಿದೆ.













0 comments:
Post a Comment