ಮಂಗಳೂರು, ನವೆಂಬರ್ 14, 2025 (ಕರಾವಳಿ ಟೈಮ್ಸ್) : ಜಪ್ಪಿನಮೊಗರು ಧ್ರವ ತ್ಯಾಜ್ಯ ಸಂಸ್ಕರಣಾ ಘಟಕದಿಂದ ಉಂಟಾಗುವ ಸಮಸ್ಯೆ ಪರಿಹರಿಸಲು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರನ್ನು ಸಾರ್ವಜನಿಕರು ಭೇಟಿಯಾಗಿ ಆಗ್ರಹಿಸಿದರು.
ಜಪ್ಪಿನಮೊಗರು ಕಡೇಕಾರ್ ಬಳಿ ಮಂಗಳೂರು ಮಹಾನಗರ ಪಾಲಿಕೆ ನಿರ್ವಹಿಸುತ್ತಿರುವ ಧ್ರವ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಪ್ರತಿದಿನ 50 ರಿಂದ 60 ಟ್ಯಾಂಕರುಗಳ ಮುಖಾಂತರ ನಗರದ ಹೊರ ವಲಯದಿಂದ ತಂದು ತುಂಬಿಸುವ ಬಗ್ಗೆ ಹಾಗೂ ಹಾಗೂ ಪರಿಸರವು ದುರ್ನಾತದಿಂದ ವಾಸಿಸಲು ತೊಂದರೆಯಾಗುವ ಬಗ್ಗೆ ಸಾರ್ವಜನಿಕರು ಐವನ್ ಡಿ ಸೋಜಾ ಅವರ ಗಮನ ಸೆಳೆದರು.
ಸಾರ್ವಜನಿಕರ ಬೇಡಿಕೆಗೆ ಸ್ಪಂದಿಸಿದ ಶಾಸಕರು, ಮಂಗಳೂರು ಮಹಾನಗರ ಪಾಲಿಕೆ ಅಯುಕ್ತ ರವಿಚಂದ್ರ ನಾಯಕ್ ಹಾಗೂ ಉಪ ಆಯುಕ್ತ ನರೇಶ್ ಶೆಣೈ ಅವರನ್ನು ಕಚೇರಿಗೆ ಕರೆಸಿ ಈ ಬಗ್ಗೆ ಪರಿಶೀಲನೆ ನಡೆಸುವಂತೆ ಸೂಚಿಸಿದರು.
ಆಯಕ್ತರು ಈ ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು. ಪ್ರಮುಖರಾದ ಸುಧಾಕರ್ ಜೆ, ಅನಿಲ್ ಡಿಸೋಜಾ, ಸಂತೋಷ್ ಕಡೇಕಾರ್, ಐವನ್ ರೋಸಾರಿಯೊ, ರೀನಾ ಡಿಸೋಜಾ, ವಿದ್ಯಾ ಡಿಸೋಜಾ, ಮೇರಿ ಡಿಸೋಜಾ, ಶ್ರೀಮತಿ ಲತಾ, ತಾರಾನಾಥ ಭಂಡಾರಿ, ಶ್ರೀಮತಿ ಜಯಶೀಲ, ಸ್ಪೂರ್ತಿ ಸುದೀರ್, ಐವನ್ ಡಿಸೋಜಾ ಕಡೇಕಾರ್, ಶ್ರೀಮತಿ ಹೆಲನ್ ಡಿಸೋಜಾ, ಹಾಗೂ ಸ್ಥಳೀಯ ನಿವಾಸಿಗಳು ನಿಯೋಗದಲ್ಲಿದ್ದರು.
ಸ್ಥಳಕ್ಕೆ ಐವನ್ ಭೇಟಿ
ಸಾರ್ವಜನಿಕರ ದೂರಿನ ಮೇರೆಗೆ ಜಪ್ಪಿಮೊಗರು ಕಡೇಕಾರ್ ವೆಟ್ವೆಲ್ ದುರ್ನಾತ ಸಮಸ್ಯೆ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಂಗಳೂರು ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಲಿಂಗಪ್ಪ ಅವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.














0 comments:
Post a Comment