ಬಿಜೈ : ಅಶ್ವತ್ಥಕಟ್ಟೆಯ ಮೇಲ್ಛಾವಣಿ ಉದ್ಘಾಟಿಸಿದ ಶಾಸಕ ವೇದವ್ಯಾಸ ಕಾಮತ್ - Karavali Times ಬಿಜೈ : ಅಶ್ವತ್ಥಕಟ್ಟೆಯ ಮೇಲ್ಛಾವಣಿ ಉದ್ಘಾಟಿಸಿದ ಶಾಸಕ ವೇದವ್ಯಾಸ ಕಾಮತ್ - Karavali Times

728x90

23 November 2025

ಬಿಜೈ : ಅಶ್ವತ್ಥಕಟ್ಟೆಯ ಮೇಲ್ಛಾವಣಿ ಉದ್ಘಾಟಿಸಿದ ಶಾಸಕ ವೇದವ್ಯಾಸ ಕಾಮತ್

ಮಂಗಳೂರು, ನವೆಂಬರ್ 24, 2025 (ಕರಾವಳಿ ಟೈಮ್ಸ್) : ತ್ರಿಮೂರ್ತಿ ಸೇವಾ ಸಮಿತಿ (ರಿ.) ಬಿಜೈ, ಆನೆಗುಂಡಿ ಇದರ ಆವರಣದಲ್ಲಿರುವ ಅಶ್ವಥಕಟ್ಟೆಯ ಮೇಲ್ಛಾವಣಿಯನ್ನು ಶಾಸಕ ವೇದವ್ಯಾಸ ಕಾಮತ್ ಉದ್ಘಾಟಿಸಿದರು. 

ಈ ಸಂದರ್ಭ ಮಾತನಾಡಿದ ಶಾಸಕ ಕಾಮತ್, ಸ್ಥಳೀಯರ ಬೇಡಿಕೆ ಹಾಗೂ ಭಕ್ತರ ಅನುಕೂಲಕ್ಕಾಗಿ ಇಲ್ಲಿನ ಅಶ್ವಥಕಟ್ಟೆಗೆ ಹಾಗೂ ಮೇಲ್ಛಾವಣಿಗೆ ಸಹಕಾರ ನೀಡಿರುವುದು ತೃಪ್ತಿ ತಂದಿದೆ. ಎಲ್ಲರಿಗೂ ಇದರಿಂದ ಉಪಯೋಗವಾದರೆ ಅದೇ ತೃಪ್ತಿ ಎಂದರು. 

ವಾರ್ಡ್ ಅಧ್ಯಕ್ಷ ಕೆ. ನಾರಾಯಣ ಮಾತನಾಡಿ, ಕೆಲವು ವರ್ಷಗಳ ಹಿಂದೆ ನಿರ್ಮಾಣವಾದ ಇಲ್ಲಿನ ಅಶ್ವಥಕಟ್ಟೆಗೆ ಶಾಸಕ ವೇದವ್ಯಾಸ ಕಾಮತ್ ಅವರು ನಮ್ಮ ಮನವಿಗೆ ಸ್ಪಂದಿಸಿ ಸಂಪೂರ್ಣ ಸಹಕಾರ ನೀಡಿದ್ದರು. ಅದರ ಉದ್ಘಾಟನೆಯಾದಾಗಲೇ ಇಲ್ಲಿನ ಭಕ್ತರ ಅನುಕೂಲಕ್ಕೆ ಅಗತ್ಯವಿರುವ ಮೇಲ್ಛಾವಣೆಯನ್ನೂ ಒದಗಿಸಿ ಕೊಡುತ್ತೇನೆಂದು ಭರವಸೆ ನೀಡಿದ್ದರು. ಇದೀಗ ಅದೂ ಸಹ ಈಡೇರಿದ್ದು ಅಗತ್ಯ ಬಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಹಕಾರ ನೀಡುತ್ತೇನೆ ಎಂದಿರುವ ಶಾಸಕರಿಗೆ ಬಿಜೈ 31ನೇ ವಾರ್ಡಿನ ಜನತೆ ಹಾಗೂ ತ್ರಿಮೂರ್ತಿ ಸೇವಾ ಸಮಿತಿಯ ಸರ್ವ ಸದಸ್ಯರ ಪರವಾಗಿ ಧನ್ಯವಾದಗಳು ಎಂದರು. 

ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಪ್ರಶಾಂತ್ ಆಳ್ವ, ಜಯಕುಮಾರ್, ಋತ್ವಿಕ್ ಕದ್ರಿ, ಹಿರಿಯರಾದ ನಾರಾಯಣ ಮಾಸ್ಟರ್, ತ್ರಿಮೂರ್ತಿ ಸೇವಾ ಸಮಿತಿಯ ಅಧ್ಯಕ್ಷ ವಸಂತ್ ಮೊದಲಾದವರು ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಬಿಜೈ : ಅಶ್ವತ್ಥಕಟ್ಟೆಯ ಮೇಲ್ಛಾವಣಿ ಉದ್ಘಾಟಿಸಿದ ಶಾಸಕ ವೇದವ್ಯಾಸ ಕಾಮತ್ Rating: 5 Reviewed By: karavali Times
Scroll to Top