ಬಂಟ್ವಾಳ, ನವೆಂಬರ್ 24, 2025 (ಕರಾವಳಿ ಟೈಮ್ಸ್) : ಕಿರು ಚಿತ್ರ ನಿರ್ಮಾಣದ ಯುವಕರ ತಂಡದ ನೂತನ ಸಂಸ್ಥೆ ನಿತ್ಯ ಸಾಯಿ ಸಿನಿ ಕ್ರಿಯೇಶನ್ಸ್ ಬಿ ಸಿ ರೋಡು ಇದರ ಉದ್ಘಾಟನೆ ಮತ್ತು ಲೋಗೋ ಬಿಡುಗಡೆ ಸಮಾರಂಭ ಹಾಗೂ ನಾಟಕ ಪ್ರದರ್ಶನ ಇಲ್ಲಿನ ಸ್ಪರ್ಶಾ ಕಲಾಮಂದಿರದಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಮೂಡೂರು-ಪಡೂರು ಬಂಟ್ವಾಳ ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್ ರೊಡ್ರಿಗಸ್ ಮಾತನಾಡಿ, ತುಳು ಭಾಷೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ನಾಟಕ, ಸಿನಿಮಾಗಳು ಉತ್ತಮ ಕೊಡುಗೆ ನೀಡಿದೆ. ಇಂತಹ ಕಾರ್ಯಕ್ಕೆ ಯುವಕರು ಮುಂದಾಗಿರುವುದು ಶ್ಲಾಘನೀಯ ಎಂದರು.
ಕಲ್ಲಡ್ಕ ನಾಗ ಸುಜ್ಞಾನ ಫ್ರೆಂಡ್ಸ್ ಸ್ಥಾಪಕ ನಾಗರಾಜ್ ಕಲ್ಲಡ್ಕ ಅವರು ಲೋಗೊ ಬಿಡುಗಡೆ ಗೊಳಿಸಿದರು. ಬಂಟ್ವಾಳ ಪುರಸಭಾಧ್ಯಕ್ಷ ಬಿ ವಾಸು ಪೂಜಾರಿ ಲೊರೆಟ್ಟೊ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್ ಶುಭ ಹಾರೈಸಿದರು.
ಉದ್ಯಮಿಗಳಾದ ಸುನಿಲ್ ಬಿ, ಸುಧಾಕರ ಆಚಾರ್ಯ, ಜಗನ್ನಾಥ ಬಂಟ್ವಾಳ, ರಂಗ ನಿರ್ದೇಶಕ ರಾಘವೇಂದ್ರ ಕಾರಂತ್ ಮೊಗರ್ನಾಡ್, ರಂಗನಟ ರತ್ನದೇವ್ ಪೂÅಂಜಾಲಕಟ್ಟೆ, ತಾಂಬೂಲ ಕಲಾವಿದೆರ್ ತಂಡದ ಸಂಚಾಲಕ ಜಯರಾಜ ಆತ್ತಾಜೆ, ನಿತ್ಯ ಸಾಯಿ ಕ್ರಿಯೇಶನ್ ಸಂಸ್ಥೆಯ ರಚನ್ ಆಲಾಡಿ ಮೊದಲಾದವರು ಭಾಗವಹಿಸಿದ್ದರು.
ರಂಗಕಲಾವಿದ ಎಚ್ ಕೆ ನಯನಾಡು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಇದೇ ವೇಳೆ ನಾಟಕ ಸಂಗೀತ ನಿರ್ದೇಶಕ ತಂಗವೇಲು ಕೊಯಿಲ ಅವರನ್ನು ಸನ್ಮಾನಿಸಲಾಯಿತು. ಬಳಿಕ ತಾಂಬೂಲ ಕಲಾವಿದೆರ್ ಪೂಂಜಾಲಕಟ್ಟೆ ತಂಡದಿಂದ “ಎಲ್ಲೆ ದಾದ ಏರೆಗ್ ಗೊತ್ತು?” ತುಳು ನಾಟಕ ಪ್ರದರ್ಶನಗೊಂಡಿತು.















0 comments:
Post a Comment