ಪರಸ್ಪರ ಸಹಕಾರ ಪ್ರವೃತ್ತಿ ವಿದ್ಯಾರ್ಥಿ ಜೀವನದಿಂದಲೇ ಬೆಳೆಸಿಕೊಳ್ಳಿ : ಜಬ್ಬಾರ್ ಸಮೋ ಕರೆ - Karavali Times ಪರಸ್ಪರ ಸಹಕಾರ ಪ್ರವೃತ್ತಿ ವಿದ್ಯಾರ್ಥಿ ಜೀವನದಿಂದಲೇ ಬೆಳೆಸಿಕೊಳ್ಳಿ : ಜಬ್ಬಾರ್ ಸಮೋ ಕರೆ - Karavali Times

728x90

29 November 2025

ಪರಸ್ಪರ ಸಹಕಾರ ಪ್ರವೃತ್ತಿ ವಿದ್ಯಾರ್ಥಿ ಜೀವನದಿಂದಲೇ ಬೆಳೆಸಿಕೊಳ್ಳಿ : ಜಬ್ಬಾರ್ ಸಮೋ ಕರೆ

ಬಂಟ್ವಾಳ, ನವೆಂಬರ್ 29, 2025 (ಕರಾವಳಿ ಟೈಮ್ಸ್) : ಪರೀಕ್ಷೆಗಳಲ್ಲಿ ಅಂಕ ಗಳಿಸುವುದಕ್ಕಿಂತ ಜೀವನದಲ್ಲಿ ಅನುಭವ ಗಳಿಸಿದವನು ಯಶಸ್ವಿಯಾಗುತ್ತಾನೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಹಾಗೂ ಹಿರಿಯ ಯಕ್ಷಗಾನ ಕಲಾವಿದ ಎಂ ಜಬ್ಬಾರ್ ಸಮೋ ಸಂಪಾಜೆ ಹೇಳಿದರು. 

ಬಂಟ್ವಾಳ ಎಸ್ ವಿ ಎಸ್ ಪದವಿ ಹಾಗೂ ಪದವಿಪೂರ್ವ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗುರುಗಳು ಹಾಗೂ ಹಿರಿಯರು ಜೀವನದ ಮಾರ್ಗದರ್ಶಕರು ಮಾತ್ರ. ಗುರಿ ತಲುಪುವವರು ನಾವು. ಹಾಗಾಗಿ ಪ್ರಯತ್ನವಿಲ್ಲದೇ ಗುರಿ ಸಾಧಿಸುವುದು ಕಷ್ಟ ಸಾಧ್ಯ. ಸಹಕಾರ ಪ್ರವೃತ್ತಿಯನ್ನು ವಿದ್ಯಾರ್ಥಿ ದಿಸೆಯಲ್ಲಿಯೇ ಬೆಳಸಿಕೊಂಡಲ್ಲಿ ಸಮಾಜದಲ್ಲಿ ಯಾವುದೇ ತಾರತಮ್ಯವಿರುವುದಿಲ್ಲ ಎಂದರು. 

ಎಸ್ ವಿ ಎಸ್ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕಿ ಶ್ರೀಮತಿ ಕೆ ರೇಖಾ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಪದವಿ ಕಾಲೇಜು ಪ್ರಾಂಶುಪಾಲ ಎಂ ಡಿ ಮಂಚಿ ಹಾಗೂ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಸುದರ್ಶನ ಬಿ ಅವರು ಕ್ರಮವಾಗಿ ಪದವಿ ಹಾಗೂ ಪದವಿಪೂರ್ವ ಕಾಲೇಜುಗಳ ವಾರ್ಷಿಕ ವರದಿ ವಾಚಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಶಿವಣ್ಣ ಪ್ರಭು ಅತಿಥಿ ಪರಿಚಯ ಮಾಡಿದರು. 

ಶ್ರೀಮತಿ ಅಖಿಲಾ ಪೈ ಎಚ್ ಅವರು ವಿಶ್ವವಿದ್ಯಾಲಯ ಮಟ್ಟದ ರ್ಯಾಂಕ್ ವಿಜೇತರನ್ನು ಪರಿಚಯಿಸಿದರು. ರ್ಯಾಂಕ್ ವಿಜೇತ ವಿದ್ಯಾರ್ಥಿನಿ ಯಶ್ವಿತಾ ಎಚ್ ಆರ್ ಅನಿಸಿಕೆ ವ್ಯಕ್ತಪಡಿಸಿದರು. ಇದೇ ವೇಳೆ ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಹಾಗೂ ವಿಶ್ವವಿದ್ಯಾಲಯ ಮಟ್ಟದ ರ್ಯಾಂಕ್ ವಿಜೇತ ವಿದ್ಯಾರ್ಥಿನಿ ಯಶ್ವಿತಾ ಎಚ್ ಆರ್ ಮತ್ತು ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದ ಎನ್ ಸಿ ಸಿ ವಿದ್ಯಾರ್ಥಿ ಅಭಿನ್ ಎಚ್ ರೈ ಅವರನ್ನು ಸನ್ಮಾನಿಸಲಾಯಿತು. 

ಶ್ರೀಮತಿ ಝೀನಾ ಕೋಹಿಲೋ ಹಾಗೂ ಶಶಿಧರ್ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀಮತಿ ಗೀತಾ ಯು. ಸ್ವಾಗತಿಸಿ, ಶ್ರೀಮತಿ ಸಹನಾ ವಂದಿಸಿದರು. ವೀಕ್ಷಿತಾ ಗಟ್ಟಿ ಹಾಗೂ ಸೂರಜ್ ಎಸ್ ಕಾರ್ಯಕ್ರಮ ನಿರೂಪಿಸಿದರು. 

ಬಳಿಕ ಕಾಲೇಜು ವಿದ್ಯಾರ್ಥಿಗಳಿಂದ “ಶಿವಭಕ್ತ ವೀರಮಣಿ” ಎಂಬ ಯಕ್ಷಗಾನ ಪ್ರಸಂಗ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ ಸಾಮಾಜಿಕ ತುಳು ನಾಟಕ ಪ್ರದರ್ಶಿಸಲ್ಪಟ್ಟಿತು.

  • Blogger Comments
  • Facebook Comments

0 comments:

Post a Comment

Item Reviewed: ಪರಸ್ಪರ ಸಹಕಾರ ಪ್ರವೃತ್ತಿ ವಿದ್ಯಾರ್ಥಿ ಜೀವನದಿಂದಲೇ ಬೆಳೆಸಿಕೊಳ್ಳಿ : ಜಬ್ಬಾರ್ ಸಮೋ ಕರೆ Rating: 5 Reviewed By: karavali Times
Scroll to Top