ಬೋಳಂತೂರಿನಲ್ಲಿ ಗೂಡ್ಸ್ ವಾಹನದಲ್ಲಿ ಅಪಾಯಕಾರಿಯಾಗಿ ಸಾಮಾಗ್ರಿ ಸಾಗಾಟದ ವೀಡಿಯೋ ವೈರಲ್ : ದಂಡ ವಿಧಿಸಿದ ಪೊಲೀಸರು - Karavali Times ಬೋಳಂತೂರಿನಲ್ಲಿ ಗೂಡ್ಸ್ ವಾಹನದಲ್ಲಿ ಅಪಾಯಕಾರಿಯಾಗಿ ಸಾಮಾಗ್ರಿ ಸಾಗಾಟದ ವೀಡಿಯೋ ವೈರಲ್ : ದಂಡ ವಿಧಿಸಿದ ಪೊಲೀಸರು - Karavali Times

728x90

23 November 2025

ಬೋಳಂತೂರಿನಲ್ಲಿ ಗೂಡ್ಸ್ ವಾಹನದಲ್ಲಿ ಅಪಾಯಕಾರಿಯಾಗಿ ಸಾಮಾಗ್ರಿ ಸಾಗಾಟದ ವೀಡಿಯೋ ವೈರಲ್ : ದಂಡ ವಿಧಿಸಿದ ಪೊಲೀಸರು

ಬಂಟ್ವಾಳ, ನವೆಂಬರ್ 24, 2025 (ಕರಾವಳಿ ಟೈಮ್ಸ್) : ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣಾ ವ್ಯಾಪ್ತಿಯ ಬೋಳಂತೂರು ಎಂಬಲ್ಲಿ ಗೂಡ್ಸ್ ವಾಹನವೊಂದು ಸಂಚಾರ ನಿಯಮ ಉಲ್ಲಂಘಿಸಿ, ಅಪಾಯಕಾರಿಯಾಗಿ ಸಾಮಾಗ್ರಿಗಳನ್ನು ಸಾಗಿಸುತ್ತಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದ್ರಿ ವಾಹನದಲ್ಲಿ ಹೇರಲಾಗಿದ್ದ ಸರಕು ಸಾಮಾಗ್ರಿ ಚಾಲನೆ ಮಧ್ಯೆಯೇ ರಸ್ತೆ ಮಧ್ಯದಲ್ಲಿ ಬಿದ್ದಿದ್ದು ವೀಡಿಯೋದಲ್ಲಿ ಕಂಡು ಬಂದಿದೆ. 

ಈ ಬಗ್ಗೆ ಸಾರ್ವಜನಿಕರು ವೀಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಮಾಡಿದ್ದು, ಇದರಿಂದ ಎಚ್ಚೆತ್ತ ಪೊಲೀಸ್ ಇಲಾಖೆ ಸದ್ರಿ ವಾಹನಕ್ಕೆ ಸಂಚಾರ ನಿಯಮದನ್ವಯ ಸೂಕ್ತ ದಂಡ ವಿಧಿಸಿದೆ. 

ಜಿಲ್ಲೆಯ ಠಾಣಾ ವ್ಯಾಪ್ತಿಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ, ವಾಹನ ಚಾಲಕರಿಗೆ ಸಂಚಾರ ನಿಯಮಗಳ ಪಾಲನೆ, ವಾಹನ ಚಾಲನೆಯ ವೇಳೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಸೇರಿದಂತೆ ಇತರೆ ಅಗತ್ಯ ಮಾಹಿತಿಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಜಿಲ್ಲಾ ಎಸ್ಪಿ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಬೋಳಂತೂರಿನಲ್ಲಿ ಗೂಡ್ಸ್ ವಾಹನದಲ್ಲಿ ಅಪಾಯಕಾರಿಯಾಗಿ ಸಾಮಾಗ್ರಿ ಸಾಗಾಟದ ವೀಡಿಯೋ ವೈರಲ್ : ದಂಡ ವಿಧಿಸಿದ ಪೊಲೀಸರು Rating: 5 Reviewed By: karavali Times
Scroll to Top