ಮಂಗಳೂರು, ನವೆಂಬರ್ 05, 2025 (ಕರಾವಳಿ ಟೈಮ್ಸ್) : ಅಪ್ರಾಪ್ತ ವಯಸ್ಸಿನ ಬಾಲಕಗೆ ಬೈಕ್ ಚಲಾಯಿಸಲು ನೀಡಿದ ತಾಯಿಗೆ ಮಂಗಳೂರು 4ನೇ ಜೆ ಎಂ ಎಫ್ ಸಿ ನ್ಯಾಯಾಲಯ 26 ಸಾವಿರ ರೂಪಾಯಿ ದಂಡ ವಿಧಿಸಿ ಬುಧವಾರ ಅದೇಶ ನೀಡಿದೆ.
ಅಕ್ಟೋಬರ್ 10 ರಂದು ಬೈಕಂಪಾಡಿಯಲ್ಲಿ ಕೆಎ19 ಎಚ್ ಆರ್ 4112 ನೋಂದಣಿ ಸಂಖ್ಯೆಯ ಬೈಕ್ ಮಾಲಕಿ ಶ್ರೀಮತಿ ಹತಿಜಮ್ಮ ಎಂಬವರು ತಮ್ಮ ಅಪ್ರಾಪ್ತ ಪ್ರಾಯದ ಮಗನಿಗೆ ಬೈಕ್ ಚಲಾಯಿಸಲು ನೀಡಿದ್ದು, ಈ ಬಗ್ಗೆ ಸಂಚಾರ ಉತ್ತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಂಗಳೂರು 4ನೇ ಜೆ ಎಂ ಎಫ್ ಸಿ ನ್ಯಾಯಾಲಯ ವಿಚಾರಣೆ ನಡೆಸಿ ಅಪ್ರಾಪ್ತ ಬಾಲಕನಿಗೆ ಬೈಕ್ ಚಲಾಯಿಸಲು ನೀಡಿದ್ದಕ್ಕೆ ವಾಹನದ ಮಾಲಿಕರಿಗೆ ನ 5 ರಂದು 26 ಸಾವಿರ ರೂಪಾಯಿ ದಂಡ ವಿಧಿಸಿ ಅದೇಶಿಸಿದೆ.















0 comments:
Post a Comment