ಮಂಗಳೂರು, ನವೆಂಬರ್ 11, 2025 (ಕರಾವಳಿ ಟೈಮ್ಸ್) : ಮಂಗಳೂರು ಮಹಾನಗರ ಪಾಲಿಕೆಯ 29ನೇ ಕಂಬ್ಳ ವಾರ್ಡಿನ ಪಿ.ವಿ.ಎಸ್ ವೃತ್ತದಿಂದ ಲಕ್ಷ್ಮೀ ನಗರ ವಸತಿ ಸಂಕೀರ್ಣ ಸಂಪರ್ಕ ರಸ್ತೆಯು 5 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟೀಕರಣಗೊಂಡಿದ್ದು ಶಾಸಕ ವೇದವ್ಯಾಸ ಕಾಮತ್ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕರು, ಸ್ಥಳೀಯ ನಿಕಟಪೂರ್ವ ಪಾಲಿಕೆ ಸದಸ್ಯೆ ಶ್ರೀಮತಿ ಲೀಲಾವತಿ ಪ್ರಕಾಶ್ ಅವರು ವಿಶೇಷ ಮುತುವರ್ಜಿ ವಹಿಸಿದ್ದರ ಪರಿಣಾಮ ಈ ರಸ್ತೆಯು ಕಾಂಕ್ರೀಟೀಕರಣಗೊಂಡಿದ್ದು ವಿಶೇಷವಾಗಿ ಲಕ್ಷ್ಮೀನಗರ ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಅನುಕೂಲವಾಗಿದೆ ಎಂದರು.
ಇದೇ ವೇಳೆ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪುಷ್ಪರಾಜ್ ಬಿ.ಎನ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಶ್ರೀನಿವಾಸ್ ನಾಯಕ್ ಇಂದಾಜೆ, ಕಾರ್ಯದರ್ಶಿ ಸತೀಶ್ ಇರಾ ಅವರನ್ನು ಶಾಸಕರು ಸನ್ಮಾನಿಸಿದರು.
ದಕ್ಷಿಣ ಮಂಡಲದ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ, ಜಿಲ್ಲಾ ವಕ್ತಾರರಾದ ರಾಜಗೋಪಾಲ್ ರೈ, ಶಕ್ತಿ ಕೇಂದ್ರದ ಅಧ್ಯಕ್ಷರಾದ ಪ್ರಕಾಶ್ ಕೊಡಿಯಾಲ್ ಬೈಲ್, ಮಂಡಲದ ಕಾರ್ಯಾಲಯ ಕಾರ್ಯದರ್ಶಿ ನೀಲೇಶ್ ಕಾಮತ್, ಲಕ್ಷ್ಮೀ ನಾರಾಯಣಿ ದೇವಸ್ಥಾನದ ಕೃಷ್ಣ ಶೇಟ್, ಅರ್ಚಕರಾದ ಅಶೋಕ್ ಭಟ್, ಲಕ್ಷ್ಮೀನಗರ ಅಪಾರ್ಟ್ ಮೆಂಟ್ ಅಸೋಸಿಯೇಶನ್ ಅಧ್ಯಕ್ಷ ಶರತ್ ಕುಮಾರ್, ಕೋಶಾಧಿಕಾರಿ ಪದ್ಮಜ ಎನ್, ಪ್ರಮುಖರಾದ ಅಚ್ಯುತ ಎಲ್, ಜಗದೀಶ್ ಕಾಮತ್, ಪದ್ಮಿನಿ ಕಾಮತ್, ಪ್ರಭಾವತಿ ಶೆಟ್ಟಿ, ರಾಧಿಕಾ ಆರ್. ನಾಯಕ್, ವಾರಿಜಾ ಎಂ.ಪಿ, ಗೀತಾ ಪೈ, ಗೀತಾ ಬಿ. ರೈ, ಶಾಂತೇರಿ ಪೈ, ಸುರೇಶ್ ಪ್ರಭು, ದೀಪಾ ಕಾಮತ್, ಶೋಭಾ, ಬಸಪ್ಪ, ಹನುಮವ್ವ, ಮಣಿಕಂಠ, ಭರತ್ ಮೊದಲಾದವರು ಉಪಸ್ಥಿತರಿದ್ದರು. ಭಾಸ್ಕರ್ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು. ಗೀತಾ ಬಿ. ರೈ ಸಹಕರಿಸಿದರು.















0 comments:
Post a Comment