ಮಂಗಳೂರು ದಕ್ಷಿಣ ಮಂಡಲದ ವತಿಯಿಂದ ವಾಜಪೇಯಿ ಅವರ 101ನೇ ಜನ್ಮ ದಿನಾಚರಣೆ - Karavali Times ಮಂಗಳೂರು ದಕ್ಷಿಣ ಮಂಡಲದ ವತಿಯಿಂದ ವಾಜಪೇಯಿ ಅವರ 101ನೇ ಜನ್ಮ ದಿನಾಚರಣೆ - Karavali Times

728x90

25 December 2025

ಮಂಗಳೂರು ದಕ್ಷಿಣ ಮಂಡಲದ ವತಿಯಿಂದ ವಾಜಪೇಯಿ ಅವರ 101ನೇ ಜನ್ಮ ದಿನಾಚರಣೆ

ಮಂಗಳೂರು, ಡಿಸೆಂಬರ್ 25, 2025 (ಕರಾವಳಿ ಟೈಮ್ಸ್) : ದೇಶದ ಮಾಜಿ ಪ್ರಧಾನಿ, ಭಾರತ ರತ್ನ, ಅಜಾತಶತ್ರು ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮದಿನದ ಪ್ರಯುಕ್ತ ನಗರದ ಕೊಡಿಯಾಲ್ ಬೈಲ್ ಅಟಲ್ ಸೇವಾ ಕೇಂದ್ರದಲ್ಲಿ “ಸುಶಾಸನ ದಿನ” (ಉತ್ತಮ ಆಡಳಿತ ದಿನ) ಆಚರಿಸಲಾಯಿತು. 

ಈ ಸಂದರ್ಭ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್ ಅವರು, ರಾಷ್ಟ್ರ ಮೊದಲು, ಅಧಿಕಾರ ನಂತರ ಎನ್ನುವ ಸಿದ್ಧಾಂತವನ್ನು ಅಟಲ್ ಜೀ ಪದೇ ಪದೇ ಉಚ್ಚರಿಸಿ ಕೋಟಿ ಕೋಟಿ ಕಾರ್ಯಕರ್ತರ ಪ್ರೇರಣೆಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ರೈತರು, ಬಡವರು, ಮಹಿಳೆಯರು ಹಾಗೂ ಹಿಂದುಳಿದ ವರ್ಗದವರ ಪರವಾಗಿ ಕೈಗೊಂಡ ಅನೇಕ ಅಭಿವೃದ್ಧಿ ಯೋಜನೆಗಳು ಹಾಗೂ ಸಾಧನೆಗಳು ಅಟಲ್ ಜೀ ಅವರ ಕನಸುಗಳು ಸಾಕಾರಗೊಳ್ಳುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.

ರವಿಶಂಕರ್ ಮಿಜಾರು ಮಾತನಾಡಿ, ದೂರದೃಷ್ಟಿ ಆಡಳಿತದ ಮೂಲಕ ಇಡೀ ದೇಶದ ಜನಮನ ಗೆದ್ದ ನಾಯಕ ಅಟಲ್ ಜೀ ಅವರ ಕೊಡುಗೆ ಅನನ್ಯ ಎಂದು ಸ್ಮರಿಸಿದರು. 

ಮಂಡಲದ ಅಧ್ಯಕ್ಷ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ಲಲ್ಲೇಶ್ ಕುಮಾರ್, ರಮೇಶ್ ಹೆಗ್ಡೆ, ನಿಕಟಪೂರ್ವ ಮ.ನ.ಪಾ ಸದಸ್ಯರುಗಳು, ಬಿಜೆಪಿ ಪ್ರಮುಖರು, ಕಾರ್ಯಕರ್ತರು ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು ದಕ್ಷಿಣ ಮಂಡಲದ ವತಿಯಿಂದ ವಾಜಪೇಯಿ ಅವರ 101ನೇ ಜನ್ಮ ದಿನಾಚರಣೆ Rating: 5 Reviewed By: karavali Times
Scroll to Top