ಬಂಟ್ವಾಳ, ಡಿಸೆಂಬರ್ 24, 2025 (ಕರಾವಳಿ ಟೈಮ್ಸ್) : ಬಿ ಸಿ ರೋಡಿನಲ್ಲಿ ದೇವಸ್ಥಾನವೊಂದರ ಕಾರ್ಯಕ್ರಮಕ್ಕೆ ಅಳವಡಿಸಿದ ಬ್ಯಾನರ್ ಧರಾಶಾಹಿಯಾಗಿ ಬಿದ್ದುಕೊಂಡಿದ್ದ ಬಗ್ಗೆ ಮಂಗಳವಾರ ಕರಾವಳಿ ಟೈಮ್ಸ್ ಸಚಿತ್ರ ವರದಿ ಪ್ರಕಟಿಸಿದ ಹಿನ್ನಲೆಯಲ್ಲಿ ಬುಧವಾರ ಸಂಬಂಧಪಟ್ಟವರು ಬ್ಯಾನರ್ ತೆರವುಗೊಳಿಸಲು ಕ್ರಮ ಕೈಗೊಂಡಿದ್ದಾರೆ.
ಬಿ ಸಿ ರೋಡಿನ ಇಂದಿರಾ ಕ್ಯಾಂಟೀನ್ ಹಿಂಭಾಗದಲ್ಲಿ ಈ ಬ್ಯಾನರ್ ಬಿದ್ದುಕೊಂಡಿರುವ ದೃಶ್ಯ ಕಾರ್ಯಕ್ರಮಕ್ಕಾಗಿ ಬ್ಯಾನರ್ ಅಳವಡಿಸುವ ಮಂದಿಗಳ ಧಾರ್ಮಿಕ ಕೇಂದ್ರಗಳ ಮೇಲಿನ ಗೌರವ, ಅಭಿಮಾನವನ್ನೆ ಪ್ರಶ್ನಿಸುವಂತಿದೆ. ಧಾರ್ಮಿಕ ಕೇಂದ್ರಗಳ ಕಾರ್ಯಕ್ರಮದ ಬ್ಯಾನರುಗಳನ್ನು ಅಳವಡಿಸುವ ಮಂದಿಗೆ ಕಾರ್ಯಕ್ರಮ ಮುಗಿದ ಬಳಿಕ ಅದರ ಗೌರವ ಕಾಪಾಡಿಕೊಂಡು ತೆರವುಗೊಳಿಸುವ ಕನಿಷ್ಠ ಪರಿಜ್ಞಾನವೂ ಇಲ್ಲದ ಬಗ್ಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಬಗ್ಗೆ ಪತ್ರಿಕೆ ಬೆಳಕಿ ಚೆಲ್ಲಿತ್ತು.
ಬುಧವಾರ ಸಂಜೆ ಸಂಬಂಧಪಟ್ಟವರು ವಾಹನದ ಮೂಲಕ ಇಲ್ಲಿ ಬಿದ್ದುಕೊಂಡಿದ್ದ ಬ್ಯಾನರನ್ನು ಗೌರವಪೂರ್ವಕವಾಗಿಯೇ ತೆರವುಗೊಳಿಸಿ ಸಾಗಾಟ ನಡೆಸುತ್ತಿರುವ ದೃಶ್ಯ ಕಂಡು ಬಂದಿದೆ.





















0 comments:
Post a Comment