ಹೊಸ ವಿದ್ಯುತ್ ಸಂಪರ್ಕಕ್ಕೆ ಸ್ಮಾರ್ಟ್ ಮೀಟರ್ ಕಡ್ಡಾಯ : ಸಾಕಷ್ಟು ಸಮಯಾವಕಾಶ ನೀಡದಿರುವ ಕ್ರಮಕ್ಕೆ ಶಾಸಕ ಕಾಮತ್ ಆಕ್ಷೇಪ - Karavali Times ಹೊಸ ವಿದ್ಯುತ್ ಸಂಪರ್ಕಕ್ಕೆ ಸ್ಮಾರ್ಟ್ ಮೀಟರ್ ಕಡ್ಡಾಯ : ಸಾಕಷ್ಟು ಸಮಯಾವಕಾಶ ನೀಡದಿರುವ ಕ್ರಮಕ್ಕೆ ಶಾಸಕ ಕಾಮತ್ ಆಕ್ಷೇಪ - Karavali Times

728x90

7 December 2025

ಹೊಸ ವಿದ್ಯುತ್ ಸಂಪರ್ಕಕ್ಕೆ ಸ್ಮಾರ್ಟ್ ಮೀಟರ್ ಕಡ್ಡಾಯ : ಸಾಕಷ್ಟು ಸಮಯಾವಕಾಶ ನೀಡದಿರುವ ಕ್ರಮಕ್ಕೆ ಶಾಸಕ ಕಾಮತ್ ಆಕ್ಷೇಪ

ಮಂಗಳೂರು, ಡಿಸೆಂಬರ್ 07, 2025 (ಕರಾವಳಿ ಟೈಮ್ಸ್) : ಮೆಸ್ಕಾಂ ವ್ಯಾಪ್ತಿಯಲ್ಲಿ ಹೊಸ ವಿದ್ಯುತ್ ಸಂಪರ್ಕ ಪಡೆಯಲು ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸಿದ್ದು, ಅದಕ್ಕೆ ಪೂರಕವಾಗಿ ಸಾಕಷ್ಟು ಸಮಯಾವಕಾಶ ನೀಡದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ಕೇಳಿ ಬರುತ್ತಿದೆ. ಈ ಬಗ್ಗೆ ಸೂಕ್ತ ಗಮನ ಹರಿಸುವಂತೆ ಶಾಸಕ ವೇದವ್ಯಾಸ ಕಾಮತ್ ಆಗ್ರಹಿಸಿದ್ದಾರೆ. 

ನೂತನ ಸ್ಮಾರ್ಟ್ ಮೀಟರ್ ಅಳವಡಿಸಲು ಈಗಿರುವ ಮೀಟರ್ ಬೋರ್ಡ್ ಗಿಂತ ಹೆಚ್ಚಿನ ಗಾತ್ರದ ಬೋರ್ಡ್ ಬೇಕಾಗುತ್ತದೆ. ಅದಕ್ಕೆ ತಕ್ಕಂತೆ ಸ್ಥಳಾವಕಾಶ ಇಲ್ಲದಿದ್ದಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಹೀಗಿರುವಾಗ ಕಡಿಮೆ ಸಮಯಾವಕಾಶ ನೀಡಿ ಕಡ್ಡಾಯ ಮಾಡಿದರೆ ಗ್ರಾಹಕರು ತೀವ್ರ ತೊಂದರೆ ಅನುಭವಿಸಬೇಕಾಗುತ್ತದೆ. ಬಡವರಿಗಂತೂ ಈ ನಿಯಮದಿಂದಾಗಿ ದುಬಾರಿ ವೆಚ್ಚವಾಗಲಿದೆ ಎಂಬುದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದವರ ಆರೋಪವಾಗಿದೆ. ಜನಸಾಮಾನ್ಯರ ಹಿತದೃಷ್ಟಿಯಿಂದ ಅವರು ಈಗಾಗಲೇ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು. 

ಸ್ಮಾರ್ಟ್ ಮೀಟರ್ ದರವನ್ನು ಏರಿಸಿ ರಾಜ್ಯ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ದರೋಡೆಗಿಳಿದಿದೆ, ಇದರಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ, ಸಚಿವರು ರಾಜೀನಾಮೆ ನೀಡಬೇಕು ಎಂದೆಲ್ಲಾ ಈಗಾಗಲೇ ಮಾಧ್ಯಮಗಳಲ್ಲಿ ನಿರಂತರವಾಗಿ ವರದಿಯಾಗಿದೆ. ಅದರ ನಡುವೆ ಇಂತಹ ಆತುರದ ನಿರ್ಧಾರಗಳಿಂದಾಗಿ ಸಾರ್ವಜನಿಕರು ಕಂಗಾಲಾಗುವಂತೆ ಮಾಡುತ್ತಿರುವುದು ಖಂಡನೀಯ ಎಂದು ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಹೊಸ ವಿದ್ಯುತ್ ಸಂಪರ್ಕಕ್ಕೆ ಸ್ಮಾರ್ಟ್ ಮೀಟರ್ ಕಡ್ಡಾಯ : ಸಾಕಷ್ಟು ಸಮಯಾವಕಾಶ ನೀಡದಿರುವ ಕ್ರಮಕ್ಕೆ ಶಾಸಕ ಕಾಮತ್ ಆಕ್ಷೇಪ Rating: 5 Reviewed By: karavali Times
Scroll to Top