ಮಂಗಳೂರು, ಡಿಸೆಂಬರ್ 24, 2025 (ಕರಾವಳಿ ಟೈಮ್ಸ್) : ಮಂಗಳೂರು ಪಟ್ಟಣ ವಿದ್ಯಾ ಸಂಸ್ಥೆಗಳು, ಉದ್ಯಮಿಗಳಿಂದ ಕೂಡಿದ ಸಿಟಿಯಾಗಿದ್ದು ಬೆಂಗಳೂರು ಮತ್ತು ಮಂಗಳೂರು ಮಧ್ಯೆ ವಂದೇ ಭಾರತ್ ರೈಲು ಪ್ರಾರಂಭಿಸಬೇಕೇಂದು ಜಿಲ್ಲಾ ಉಸ್ತುವಾರಿ ಮಂತ್ರಿ ದಿನೇಶ್ ಗುಂಡೂರಾವ್ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಪತ್ರ ಬರೆದಿದ್ದಾರೆ.
ಬೆಂಗಳೂರಿನ ನಂತರ ಬೆಳವಣಿಗೆ ಹೊಂದುತ್ತಿರುವ ಸಿಟಿಗಳಲ್ಲಿ ಮಂಗಳೂರು ಸಹ ಮುಂಚೂಣಿಯಲ್ಲಿದ್ದು ಅತ್ಯುತ್ತಮ ಆಸ್ಪತ್ರೆಗಳು, ವಿದ್ಯಾ ಸಂಸ್ಥೆಗಳು, ಹಲವಾರು ಉದ್ಯಮಗಳು ನಡೆಯುತ್ತಿದೆ. ದಿನಕ್ಕೆ ಸಾವಿರಾರು ಜನರು ಪ್ರಯಾಣಿಸುತ್ತಿದ್ದು ಜನರಿಗೆ ವಂದೇ ಭಾರತ್ ಪ್ರಾರಂಬಿಸಿದರೆ ಉದ್ಯಮಗಳ ಬೆಳವಣಿಗೆಗೆ ಅನುಕೂಲವಾಗಲಿದೆ. ಹಲವಾರು ಉದ್ಯಮಿಗಳು ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣಿಸಲು ಇದು ಸಹಾಯವಾಗಲಿದೆ. ದಿನಕ್ಕೆ 3 ವಂದೇ ಭಾರತ್ ರೈಲು ಪ್ರಾರಂಭಿಸಬೇಕೆಂದು ಕರ್ನಾಟಕ ಸರ್ಕಾರದ ಪರವಾಗಿ ಗುಂಡೂರಾವ್ ಪತ್ರ ಬರೆದು ಆಗ್ರಹಿದ್ದಾರೆ.




















0 comments:
Post a Comment