ಬಂಟ್ವಾಳ, ಡಿಸೆಂಬರ್ 08, 2025 (ಕರಾವಳಿ ಟೈಮ್ಸ್) : ತನ್ನ ಜಮೀನಿನಲ್ಲಿ ಅಡಿಕೆ ಹೆಕ್ಕುತ್ತಿರುವಾಗ ವ್ಯಕ್ತಿಯೋರ್ವರಿಗೆ ಅಣ್ಣನೇ ಪತ್ನಿಯೊಂದಿಗೆ ಸೇರಿ ಹಲ್ಲೆ ನಡೆಸಿದ ಘಟನೆ ಕೊಡಂಬೆಟ್ಟು ಗ್ರಾಮದ ವಾಮದಪದವು ಕೊಡೈಲು ಎಂಬಲ್ಲಿ ಡಿ 5 ರಂದು ಬೆಳಿಗ್ಗೆ ನಡೆದಿದೆ.
ಇಲ್ಲಿನ ನಿವಾಸಿ ಶೀನ ಶೆಟ್ಟಿ ಎಂಬವರ ಪುತ್ರ ಪ್ರಕಾಶ ಶೆಟ್ಟಿ (41) ಎಂಬವರೇ ಹಲ್ಲೆಗೊಳಗಾದ ವ್ಯಕ್ತಿ. ಇವರ ಅಣ್ಣ ರಮೇಶ್ ಶೆಟ್ಟಿ ಹಾಗೂ ಅವರ ಪತ್ನಿ ವಿದ್ಯಾಶ್ರೀ ಎಂಬವರೇ ಹಲ್ಲೆ ನಡೆಸಿದ ಆರೋಪಿಗಳು.
ಪ್ರಕಾಶ್ ಶೆಟ್ಟಿ ಅವರಿಗೆ ಸರ್ವೆ ನಂಬ್ರ 7/32ರಲ್ಲಿ 26 ಸೆಂಟ್ಸ್, 29/2 ರಲ್ಲಿ 4 ಸೆಂಟ್ಸ್ ಜಾಗವಿದ್ದು, ಡಿ 5 ರಂದು ತನ್ನ ಜಾಗದಲ್ಲಿ ಅಡಿಕೆ ಹೆಕ್ಕುತ್ತಿರುವಾಗ ಆರೋಪಿಗಳಿಬ್ಬರು ತೋಟಕ್ಕೆ ಬಂದು ಹಲ್ಲೆ ಮಾಡಿದ್ದಲ್ಲದೆ ನಿನ್ನನ್ನು ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment