ಬಂಟ್ವಾಳ, ಡಿಸೆಂಬರ್ 08, 2025 (ಕರಾವಳಿ ಟೈಮ್ಸ್) : ತಾಲೂಕಿನ ನಾವೂರು ಗ್ರಾಮದ ಕೆಳಗಿನ ನಾವೂರು ಎಂಬಲ್ಲಿ ಡಿ 5 ರಂದು ಅಪರಾಹ್ನ ಪಿಕಪ್ ವಾಹನ ಡಿಕ್ಕಿ ಹೊಡೆದು ಸ್ಕೂಟರಿನಲ್ಲಿ ಸಂಚರಿಸುತ್ತಿದ್ದ ದಂಪತಿ ಹಾಗೂ ಪುತ್ರಿ ಗಾಯಗೊಂಡಿದ್ದಾರೆ.
ಗಾಯಗೊಂಡ ಸ್ಕೂಟರ್ ಸವಾರರನ್ನು ನಾವೂರು ಗ್ರಾಮದ ಪೂಪಾಡಿಕಟ್ಟೆ ನಿವಾಸಿ ಆರಿಫಾ ಬಾನು (37), ಅವರ ಪತಿ ರಮ್ಲ ಮನ್ಸೂರ್ ಹಾಗೂ ಪುತ್ರಿ ಮಹ್ ರೂಫ್ ಎಂದು ಹೆಸರಿಸಲಾಗಿದೆ. ಇವರು ಡಿ 5 ರಂದು ಸ್ಕೂಟರಿನಲ್ಲಿ ರಮ್ಲ ಮನ್ಸೂರ್ ಸವಾರರಾಗಿ ಪತ್ನಿ ಹಾಗೂ ಪುತ್ರಿ ಸಹಸವಾರರಾಗಿ ನಾವೂರು ಕಡೆಯಿಂದ ಬಿ ಸಿ ರೋಡು ಕಡೆಗೆ ಸಂಚರಿಸುತ್ತಿದ್ದ ವೇಳೆ ಕೆಳಗಿನ ನಾವೂರು ಎಂಬಲ್ಲಿ ಬಿ ಸಿ ರೋಡು ಕಡೆಯಿಂದ ಗೋಪಾಲ ಎಂಬವರು ಚಲಾಯಿಸಿಕೊಂಡು ಬಂದ ಪಿಕಪ್ ವಾಹನ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಮೂವರೂ ಕೂಡಾ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment