ಬಂಟ್ವಾಳ, ಡಿಸೆಂಬರ್ 19, 2025 (ಕರಾವಳಿ ಟೈಮ್ಸ್) : ಬ್ಯಾರಿ ಜನಾಂಗ ಪ್ರಾಚೀನ ಕಾಲದಿಂದಲೂ ನೆಚ್ಚಿಕೊಂಡು ಬಂದಿರುವ ಸಾಂಸ್ಕೃತಿಕ ಕಲೆಯಾಗಿದೆ ದಫ್ ಕಲೆ ಎಂದು ದಕ್ಷಿಣ ಕ್ನಡ ಮತ್ತು ಉಡುಪಿ ಜಿಲ್ಲಾ ದಫ್ ಎಸೋಸಿಯೇಶನ್ ಅಧ್ಯಕ್ಷ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಲತೀಫ್ ನೇರಳಕಟ್ಟೆ ಹೇಳಿದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ವಿಟ್ಲ ಸಮೀಪದ ಒಕ್ಕೆತ್ತೂರು ನೂರುಲ್ ಹುದಾ ಸಮುದಾಯ ಭವನದಲ್ಲಿ ಡಿ 18 ರಂದು ನಡೆದ ಬಂಟ್ವಾಳ ತಾಲೂಕು ಮಟ್ಟದ ದಫ್ ಸ್ಪರ್ದಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಒಂದು ಜನಾಂಗದ ಅಳಿವು-ಉಳಿವು ಅವರ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬಳಕೆಯನ್ನು ಅವಲಂಬಿಸಿರುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಒಕ್ಕೆತ್ತೂರು ಬದ್ರಿಯಾ ಜುಮಾ ಮಸೀದಿ ಖತೀಬ್ ಮಹಮ್ಮದ್ ರಫೀಕ್ ಅಹ್ಸನಿ ಮಾತನಾಡಿ, ದಫ್ ಕಲೆಯನ್ನು ಪೆÇ್ರೀತ್ಸಾಹಿಸುವ ನಿಟ್ಟಿನಲ್ಲಿ ಬ್ಯಾರಿ ಅಕಾಡೆಮಿ ಹಮ್ಮಿಕೊಂಡಿರುವ ಇಂತಹ ದಫ್ ಸ್ಪರ್ದಾ ಕಾರ್ಯಕ್ರಮಗಳು ಶ್ಲಾಘನೀಯ ಎಂದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು ಎಚ್ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ವಿವರಿಸಿದರು. ಹಿರಿಯ ದಫ್ ತರಬೇತುದಾರ ಬಿ ಎಂ ಹಸೈನಾರ್ ಕಡಂಬು, ಅಬ್ದುಲ್ ಕರೀಂ ಕುದ್ದುಪದವು, ಒಕ್ಕೆತ್ತೂರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ವಿ ಎಂ ಅಶ್ರಫ್, ಕಾರ್ಯದರ್ಶಿ ಇಕ್ಬಾಲ್ ಮೇಗಿನಪೇಟೆ, ಪ್ರಮುಖರಾದ ವಿ ಎಸ್ ಇಬ್ರಾಹಿಂ ಒಕ್ಕೆತ್ತೂರು, ಹಸೈನಾರ್ ಹಾಜಿ ಪೈಲ್ವಾನ್, ಒಕ್ಕೆತ್ತೂರು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಸಿ ಎಚ್ ಹಾರಿಸ್ ಮೊದಲಾದವರು ಭಾಗವಹಿಸಿದ್ದರು.
ಇದೇ ವೇಳೆ ನಡೆದ ಬಂಟ್ವಾಳ ತಾಲೂಕು ಮಟ್ಟದ ದಫ್ ಸ್ಪರ್ಧೆಯಲ್ಲಿ ಕಡಂಬು ರಿಫಾಯಿಯ್ಯ ದಫ್ ತಂಡ ಪ್ರಥಮ ಹಾಗೂ ಒಕ್ಕೆತ್ತೂರು ದಫ್ ತಂಡ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ, ಕಾರ್ಯಕ್ರಮದ ಸಂಚಾಲಕ ಅಬೂಬಕರ್ ಅನಿಲಕಟ್ಟೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅಕಾಡಮಿ ಸಿಬಂದಿ ವಿಜಯ್ ವಂದಿಸಿದರು.



















0 comments:
Post a Comment