ಮಂಗಳೂರು, ಡಿಸೆಂಬರ್ 15, 2025 (ಕರಾವಳಿ ಟೈಮ್ಸ್) : ಸಾಮಾಜಿಕ ಜಾಲತಾಣ ಫೇಸ್ ಬುಕ್ಕಿನಲ್ಲಿ ತಲವಾರು ಹಿಡಿದು ನೃತ್ಯ ಮಾಡಿ ರೀಲ್ಸ್ ಮಾಡಿ ಪೋಸ್ಟ್ ಹಂಚಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಕಾವೂರು ಪೊಲೀಸರು ಡಿ 13 ರಂದು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮಂಗಳೂರು-ಬಂದರು ಜೆ.ಡಮ್ ರೋಡ್ ಅಮೀನ್ ಉಲ್ಲಾ 1ನೇ ಮಹಡಿ ನಿವಾಸಿ ದಿವಂಗತ ಉಮ್ಮರ್ ಅವರ ಪುತ್ರ ಅಮೀರ್ ಸುಹೈಲ್ (28) ಹಾಗೂ ಕಾವೂರು-ಉರುಂದಾಡಿಗುಡ್ಡೆ ಧನುಷ್ ಗ್ರೌಂಡ್ ಬಳಿ ನಿವಾಸಿ ದಿವಂಗತ ರಮೇಶ್ ಅವರ ಪುತ್ರ ಸುರೇಶ (29) ಎಂದು ಹೆಸರಿಸಲಾಗಿದೆ.
ಡಿ 13 ರಂದು ಸಾಮಾಜಿಕ ಜಾಲತಾಣವಾದ ಪೇಸ್ ಬುಕ್ ಖಾತೆಯಲ್ಲಿ “ಸುರೇಶ್ ಪಿ ಎಸ್ ವೈ” ಎಂಬ ಹೆಸರಿನ ಪೇಸ್ ಬುಕ್ ಖಾತೆ ಹೊಂದಿರುವ ಸುರೇಶ ಎಂಬಾತ ತನ್ನ ಫೇಸ್ ಬುಕ್ ಖಾತೆಯಲ್ಲಿ ಅಮೀರ್ ಸುಹೇಲ್ ತಲ್ವಾರ್ ಹಿಡಿದು ಹಾಡಿಗೆ ಡ್ಯಾನ್ಸ್ ಮಾಡಿದ ವಿಡಿಯೋ ಮೇಲೆ ವೈಬ್ಸ್ ಮತ್ತು ಬಿಳಿ ಬಣ್ಣದ ಹಾರ್ಟ್ ಗುರುತಿನ ಚಿಹ್ನೆಯೊಂದಿಗೆ ಸ್ಟೋರಿಗೆ ಹಾಕಿ, ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕರಿಗೆ ಭಯ ಹುಟ್ಟಿಸುವ ಅಮೀರ್ ಸುಹೇಲ್ ಹಾಗೂ ಸುರೇಶ ಎಂಬವರ ವಿರುದ್ದ ಕಾವೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 188/2025 ಕಲಂ 352(2) ಭಾರತೀಯ ನ್ಯಾಯ ಸಂಹಿತೆ 2023 ಜೊತೆಗೆ 4, 25(1ಬಿ) ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಹಾಗೂ 66 ಐ.ಟಿ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
ಡಿ 13 ರಂದು ಈ ಪ್ರಕರಣದಲ್ಲಿ ಒಳಗೊಂಡಿರುವ ಇಬ್ಬರು ಆರೋಪಿಗಳನ್ನು ಅವರು ರೀಲ್ಸ್ ಮಾಡಲು ಬಳಸಿದ ತಲ್ವಾರ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲು ಬಳಸಿದ ಮೊಬೈಲ್ ಫೋನುಗಳ ಸಹಿತ ಪೊಲೀಸರು ದಸ್ತಗಿರಿ ಮಾಡಿದ್ದಾರೆ.
ಮಂಗಳೂರು ಉತ್ತರ ಉಪವಿಭಾಗದ ಎ.ಸಿ.ಪಿ. ಶ್ರೀಕಾಂತ್ ಕೆ. ಅವರ ಮಾರ್ಗದರ್ಶನದಂತೆ ಕಾವೂರು ಪೆÇಲೀಸ್ ಠಾಣಾ ಪೆÇಲೀಸ್ ಇನ್ಸ್ ಪೆಕ್ಟರ್ ರಾಘವೇಂದ್ರ ಎಂ. ಬೈಂದೂರು ಅವರು, ಪಿಎಸೈ ಮಲ್ಲಿಕಾರ್ಜುನ ಬಿರಾದಾರ ಹಾಗೂ ಕಾವೂರು ಠಾಣಾ ಸಿಬ್ಬಂದಿಗಳಾದ ಸಂಭಾಜಿ ಕದಂ, ಕೆಂಚನ ಗೌಡ, ಶರಣಪ್ಪ, ರಾಘವೇಂದ್ರ, ರಿಯಾಜ್ ಅವರುಗಳೊಂದಿಗೆ ಆರೋಪಿತರನ್ನು ಪತ್ತೆಮಾಡಿ ದಸ್ತಗಿರಿ ಮಾಡಿದ್ದಾರೆ.















0 comments:
Post a Comment