ಮಂಗಳೂರು ಪೊಲೀಸರ ಕಾರ್ಯಾಚರಣೆ : ಅಂತರಾಜ್ಯ ಕುಖ್ಯಾತ ಆರೋಪಿಗಳಿಬ್ಬರ ಬಂಧನ - Karavali Times ಮಂಗಳೂರು ಪೊಲೀಸರ ಕಾರ್ಯಾಚರಣೆ : ಅಂತರಾಜ್ಯ ಕುಖ್ಯಾತ ಆರೋಪಿಗಳಿಬ್ಬರ ಬಂಧನ - Karavali Times

728x90

16 December 2025

ಮಂಗಳೂರು ಪೊಲೀಸರ ಕಾರ್ಯಾಚರಣೆ : ಅಂತರಾಜ್ಯ ಕುಖ್ಯಾತ ಆರೋಪಿಗಳಿಬ್ಬರ ಬಂಧನ

ಮಂಗಳೂರು, ಡಿಸೆಂಬರ್ 16, 2025 (ಕರಾವಳಿ ಟೈಮ್ಸ್) : ಬೈಕ್ ಕಳವು ಹಾಗೂ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಚೈನ್ ಕಸಿದುಕೊಂಡಿದ್ದ ಪ್ರಕರಣ ಬೇಧಿಸಿದ ಮಂಗಳೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. 

ಬಂಧಿತ ಆರೋಪಿಗಳನ್ನು ಉಳ್ಳಾಲ, ನ್ಯೂತೋಟ ನಿವಾಸಿ ಇಬ್ರಾಹಿಂ ಎಂಬವರ ಪುತ್ರ ಫೈಸಲ್ ಅಲಿಯಾಸ್ ತೋಟ ಫೈಸಲ್ ಹಾಗೂ ಮೈಸೂರು ವಿನಾಯಕ ನಗರ ನಿವಾಸಿ ವೈ ಎನ್ ನಾಗೇಶ್ ಎಂಬವರ ಪುತ್ರ ನಿತಿನ್ ಎಂದು ಹೆಸರಿಸಲಾಗಿದೆ. 

ಡಿಸೆಂಬರ್ 12 ರಂದು ಯೆಯ್ಯಾಡಿಯ ಶ್ರೀ ಹರಿ ಕಾಂಪ್ಲೆಕ್ಸ್ ಪಾರ್ಕಿಂಗ್ ಬಳಿ ನಿಲ್ಲಿಸಿದ್ದ ಯಮಹಾ ಎಫ್ ಝಡ್ ಕಂಪೆನಿಯ ಕೆಎ19 ಇಆರ್7755 ನೋಂದಣಿ ಸಂಖ್ಯೆಯ ಬೈಕ್ ಕಳವಾದ ಬಗ್ಗೆ ಕದ್ರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಬಗ್ಗೆ ಕದ್ರಿ ಅಫರಾಧ ವಿಭಾಗದ ಸಿಬ್ಬಂದಿಗಳಿಗೆ ದೊರೆತ ಖಚಿತ ಮಾಹಿತಿಯಂತೆ ಡಿ 16 ರಂದು ಆರೋಪಿಗಳನ್ನು ವಶಕ್ಕೆ ಪಡೆದು ಕೂಲಂಕುಷವಾಗಿ ವಿಚಾರಿಸಿದಾಗ ಇದೇ ಆರೋಪಿಗಳು ಡಿ 13 ರಂದು ಭಟ್ಕಳ ಗ್ರಾಮೀಣ ಪೆÇಲೀಸ್ ಠಾಣಾ ಸರಹದ್ದಿನ ಗರ್ಡಿ ಹಿತ್ಲು ಬೆಳಕೆ ಎಂಬಲ್ಲಿ ವಯೋವೃದ್ದ ಮಹಿಳೆ  ಶ್ರೀಮತಿ ಹೊನ್ನಮ್ಮ ಮಹಾದೇವ ನಾಯ್ಕ್ (70) ಅವರ ಕುತ್ತಿಗೆಯಿಂದ ಚಿನ್ನದ ಚೈನ್ ಕಸಿದುಕೊಂಡು ಪರಾರಿಯಾದ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಬಾಯಿ ಬಿಟ್ಟಿದ್ದಾರೆ. 

ಆರೋಪಿಗಳಿಂದ 1.20 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರ, ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಸುಮಾರು 45 ಸಾವಿರ ರೂಪಾಯಿ ಮೌಲ್ಯದ ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 

ಆರೋಪಿ ಪೈಸಲ್ ವಿರುದ್ದ ಕರ್ನಾಟಕದ ಉಡುಪಿ, ಕಾರ್ಕಳ, ಮಣಿಪಾಲ, ಮಂಗಳೂರು, ಬೆಳ್ತಂಗಡಿ, ವಿಟ್ಲ, ಕಂಕನಾಡಿ ನಗರ ಪೆÇಲೀಸ್ ಠಾಣೆ, ಪುತ್ತೂರು, ಶಿರ್ವ, ಸುರತ್ಕಲ್, ಕಡಬ, ಕೊಣಾಜೆ, ಮಡಿಕೇರಿಯ ಕುಶಾಲ ನಗರ ಹಾಗೂ ಕೇರಳ ರಾಜ್ಯಗಳಲ್ಲಿ ರಾಬರಿ, ದರೋಡೆ, ಕಳ್ಳತನದ ಮತ್ತು ಕೊಲೆ ಪ್ರಕರಣ ಸೇರಿದಂತೆ ಸುಮಾರು 42 ಪ್ರಕರಣಗಳು ದಾಖಲಾಗಿರುತ್ತದೆ. ಈತನ ವಿರುದ್ದ ವಿವಿಧ ನ್ಯಾಯಾಲಯಗಳಲ್ಲಿ 10ಕ್ಕಿಂತಲೂ ಹೆಚ್ಚು ಜಾಮೀನು ರಹಿತ ವಾರೆಂಟ್ ಇದ್ದು, ನ್ಯಾಯಾಲಯಕ್ಕೆ ಹಾಜರಾಗದೇ ತಲೆ ತಪ್ಪಿಸಿಕೊಂಡಿರುತ್ತಾನೆ.

ಮಂಗಳೂರು ಪೂರ್ವ ಪೆÇಲೀಸ್ ಠಾಣೆಯ ನಿರೀಕ್ಷಕ ಅನಂತ ಪದ್ಮನಾಭ, ಪಿಎಸ್ಸೈ ಮನೋಹರ್ ಪ್ರಸಾದ್, ಎಎಸೈಗಳಾದ ಚಂದ್ರಶೇಖರ್, ಸುಧಾಕರ್ ರಾವ್, ರಾಜಶೇಖರ್, ಎಚ್ ಸಿಗಳಾದ ಲೋಕೆಶ್, ಸಂತೋಷ್ ಡಿ.ಕೆ., ಸುರೇಶ್, ದಿಲೀಪ್, ಮೋಹನ್, ಮಲ್ಲಪ್ಪ ಬಿ., ಪಿಸಿಗಳಾದ ಸುನಿಲ್, ಮಣಿಕಂಠ, ಮೌಲಾ ಅಹಮ್ಮದ್ ಮತ್ತು ಮಂಜುನಾಥ ವಡ್ಡರ ಹಾಗೂ ಕದ್ರಿ ಠಾಣೆಯ ಸಿಬ್ಬಂದಿ ವರ್ಗ ಆರೋಪಿಗಳ ಬಂಧನ ಕಾರ್ಯಾಚರಣೆಯಲ್ಲಿ  ಪಾಲ್ಗೊಂಡಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು ಪೊಲೀಸರ ಕಾರ್ಯಾಚರಣೆ : ಅಂತರಾಜ್ಯ ಕುಖ್ಯಾತ ಆರೋಪಿಗಳಿಬ್ಬರ ಬಂಧನ Rating: 5 Reviewed By: karavali Times
Scroll to Top