ಮಂಗಳೂರು, ಡಿಸೆಂಬರ್ 08, 2025 (ಕರಾವಳಿ ಟೈಮ್ಸ್) : ಮದುವೆ ಆಮಂತ್ರಣ ಪತ್ರಿಕೆ ನೀಡಲು ಹೋದ ಯುವಕ ನಾಪತ್ತೆಯಾಗಿರುವ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಕ್ಷಣ್ ಜೆ.ಕೆ (32) ಎಂಬಾತನೇ ಕಾಣೆಯಾದ ಯುವಕ. ಈತ ಡಿ 6 ರಂದು ಕಾರಿನಲ್ಲಿ ಹೊರಟು ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೆ ಮದುವೆಯ ಆಮಂತ್ರಣ ಪತ್ರ ನೀಡಿ ಬರುತ್ತೇನೆಂದು ಹೇಳಿ ಹೋದವರು ಕಾಣೆಯಾಗಿದ್ದಾರೆ. ಅದೇ ದಿನ ರಾತ್ರಿ 10.30 ರ ವೇಳೆಗೆ ಕಾರು ನಗರದ ಟೌನ್ ಹಾಲ್ ಬಳಿ ಪತ್ತೆಯಾಗಿದೆ.
ಕಾಣೆಯಾದವರ ಚಹರೆ : 5.8 ಅಡಿ ಎತ್ತರ, ಸಧೃಡ ಶರೀರ, ಗೋಧಿ ಮೈ ಬಣ್ಣ, ಕಪ್ಪು ಕೂದಲು, ತಿಳಿ ನೀಲಿ ಬಣ್ಣದ ಉದ್ದ ತೋಳಿನ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು. ತುಳು ಕನ್ನಡ, ಇಂಗ್ಲೀಷ್ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಇದ್ದಲ್ಲಿ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.














0 comments:
Post a Comment