ಬಂಟ್ವಾಳ, ಡಿಸೆಂಬರ್ 05, 2025 (ಕರಾವಳಿ ಟೈಮ್ಸ್) : ಲಾರಿ ಮೂಲಕ ಅಕ್ರಮ ಕೆಂಪು ಕಲ್ಲು ಸಾಗಾಟ ಪ್ರಕರಣ ಬೇಧಿಸಿದ ವಿಟ್ಲ ಪೊಲೀಸರು ಕಲ್ಲು ಸಹಿತ ಲಾರಿ ಹಾಗೂ ಚಾಲಕನನ್ನು ಬಂಧಿಸಿದ ಘಟನೆ ಕೊಳ್ನಾಡು ಗ್ರಾಮದ ಕುಡ್ತಮುಗೇರು ಎಂಬಲ್ಲಿ ಡಿ 4 ರಂದು ನಡೆದಿದೆ.
ಗುರುವಾರ ಬೆಳಿಗ್ಗೆ ಕೊಳ್ನಾಡು ಗ್ರಾಮದ ಕೂಡ್ತಮುಗೇರು ಎಂಬಲ್ಲಿ ವಿಟ್ಲ ಪೊಲೀಸ್ ಠಾಣಾ ಪಿಎಸ್ಸೈ ರತ್ನ ಕುಮಾರ್ ನೇತೃತ್ವದ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಬೋಳ್ಪದೆ ಕಡೆಯಿಂದ ಕುಡ್ತಮುಗೇರು ಕಡೆಗೆ ಬರುತ್ತಿದ್ದ ಕೆಎ21 ಎ9095 ನೋಂದಣಿ ಸಂಖ್ಯೆಯ ಲಾರಿಯನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಈ ಅಕ್ರಮ ಕೆಂಪು ಕಲ್ಲು ಸಾಗಾಟ ಪ್ರಕರಣ ಬೆಳಕಿಗೆ ಬಂದಿದೆ.
ಲಾರಿಯಲ್ಲಿ ಕೆಂಪು ಕಲ್ಲು ತುಂಬಿಸಿಕೊಂಡು ಸಾಗಿಸುತ್ತಿರುವುದು ಕಂಡುಬಂದಿದ್ದು, ಈ ಬಗ್ಗೆ ಲಾರಿ ಚಾಲಕ ಎನ್ ಸಿ ಶರೀಫ್ ಅವರಲ್ಲಿ ಪೊಲೀಸರು ವಿಚಾರಿಸಿದಾಗ, ಯಾವುದೇ ಪರವಾನಿಗೆ ಅಥವಾ ದಾಖಲಾತಿ ಇಲ್ಲದೆ, ಅಕ್ರಮವಾಗಿ ಕೆಂಪು ಕಲ್ಲುಗಳನ್ನು ಕಳ್ಳತನದಿಂದ ತುಂಬಿಸಿಕೊಂಡು ಸಾಗಿಸುತ್ತಿರುವುದು ಗೊತ್ತಾಗಿದೆ. ಈ ಬಗ್ಗೆ ಮುಂದಿನ ಕಾನೂನು ಕ್ರಮಕ್ಕಾಗಿ ಲಾರಿ ಚಾಲಕನನ್ನು ಹಾಗೂ ಲಾರಿಯನ್ನು ಲೋಡ್ ಸಮೇತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.














0 comments:
Post a Comment