ಮಂಗಳೂರು, ಜನವರಿ 17, 2026 (ಕರಾವಳಿ ಟೈಮ್ಸ್) : ಕರಾವಳಿ ಉತ್ಸವ ಕಾರ್ಯಕ್ರಮದ ಪ್ರಯುಕ್ತ ತಣ್ಣೀರುಬಾವಿ ಬ್ಲೂ ಪ್ಲ್ಯಾಗ್ ಬೀಚಿನಲ್ಲಿ ಜನವರಿ 17 ಹಾಗೂ 19 ರಂದು ಅಂತರಾಷ್ಟ್ರೀಯ ಗಾಳಿಪಟ ಉತ್ಸವ ಕಾರ್ಯಕ್ರಮ ನಡೆಯಲಿದೆ. ಸದರಿ ಕಾರ್ಯಕ್ರಮಕ್ಕೆ ಗಣ್ಯರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದರಿಂದ ಅಪರಾಹ್ನ 3 ಗಂಟೆಯ ನಂತರ ಕೊಟ್ಟಾರ ಚೌಕಿ-ಪಣಂಬೂರು ರಾಷ್ಟ್ರೀಯ ಹೆದ್ದಾರಿ ಮತ್ತು ತಣ್ಣೀರುಬಾವಿ ರಸ್ತೆಯಲ್ಲಿ ಸಾರ್ವಜನಿಕ ವಾಹನಗಳ ಸಂಚಾರದಲ್ಲಿ ದಟ್ಟಣೆ ಉಂಟಾಗುವ ಸಾಧ್ಯತೆಗಳಿರುವುದರಿಂದ ಕಾರ್ಯಕ್ರಮ ನಡೆಯುವ ಸಮಯ ಕುದುರೆಮುಖ ಜಂಕ್ಷನ್ನಿನಿಂದ ತಣ್ಣೀರುಬಾವಿ ಬೀಚ್ ವರೆಗಿನ ರಸ್ತೆಯ ಎರಡು ಬದಿಗಳಲ್ಲಿ ಯಾವುದೇ ವಾಹನಗಳನ್ನು ಪಾರ್ಕ್ ಮಾಡುವಂತಿಲ್ಲ.
ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ಸುಲ್ತಾನ್ ಬತ್ತೇರಿಯಿಂದ ಫೇರಿಯನ್ನು ಅಥವಾ ಕೆ.ಐ.ಓ.ಸಿ.ಎಲ್ ನಿಂದ ತಣ್ಣೀರುಬಾವಿಗೆ ಉಚಿತ ಕೆ.ಎಸ್.ಅರ್.ಟಿ.ಸಿ ಬಸ್ಸಿನ ವ್ಯವಸ್ಥೆಯನ್ನು ಮಾಡಲಾಗಿದ್ದು, ತಮ್ಮ ಅನುಕೂಲಕ್ಕಾಗಿ ಉಪಯೋಗಿಸಬಹುದಾಗಿದೆ.
ನಿಗದಿಪಡಿಸಿರುವ ಪಾರ್ಕಿಂಗ್ ಸ್ಥಳಗಳು :
1. ದೋಸ್ತ್ ಗ್ರೌಂಡ್
2. ಕಟ್ಟೆ ಗ್ರೌಂಡ್ ಪಾರ್ಕಿಂಗ್ ಸ್ಥಳ
3. ತಣ್ಣೀರುಬಾವಿ ಮಸೀದಿ ಎದುರು ಪಾರ್ಕಿಂಗ್ ಸ್ಥಳ
4. ರಫ್ತಾರ್ ಪಾರ್ಕಿಂಗ್
5. ತಣ್ಣೀರುಬಾವಿ ಬೀಚ್ ಪಾರ್ಕಿಂಗ್
6. ಡೆಲ್ಟಾ ಮೈದಾನ ಪಾರ್ಕಿಂಗ್
7. ಫೀಜಾ ಕ್ರಿಕೆಟ್ ಗ್ರೌಂಡ್ (ಹೋಟೆಲ್ ನಿತ್ಯಾಧರ ಮುಂಭಾಗದ ಪಾರ್ಕಿಂಗ್ ಮೈದಾನ)
8. ಎ.ಜೆ ಶೆಟ್ಟಿ ರವರ ಗ್ರೌಂಡ್ (ಎಸ್.ಇ.ಝ್ ರಸ್ತೆ)
ಪಣಂಬೂರು ಬೀಚ್ ಕಾರ್ಯಕ್ರಮ :
ಜನವರಿ ಮತ್ತು 18 ರಂದು ಪಣಂಬೂರು ಬೀಚಿನಲ್ಲಿ ಮ್ಯೂಸಿಕ್ ಫೆಸ್ಟಿವಲ್, ತಾಯ್ಕಡಂ ಬ್ರಿಡ್ಜ್ ಕಾನ್ಸ್‍ರ್ಟ್, ಜಾವೇದ್ ಅಲಿ ನೈಟ್, ಮರಳು ಶಿಲ್ಪಕಲೆ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿರುವುದರಿಂದ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರುವ ಕಾರಣ ಅಪರಾಹ್ನ 3 ಗಂಟೆಯ ನಂತರ ಕೂಳೂರು-ಪಣಂಬೂರು ಬೈಕಂಪಾಡಿ ರಾಷ್ಟ್ರೀಯ ಹೆದ್ದಾರಿ ಮತ್ತು ಪಣಂಬೂರು ಬೀಚ್ ರಸ್ತೆಯಲ್ಲಿ ಸಾರ್ವಜನಿಕ ವಾಹನಗಳ ಸಂಚಾರದಲ್ಲಿ ದಟ್ಟಣೆ ಉಂಟಾಗುವ ಸಾಧ್ಯತೆಗಳು ಇರುತ್ತದೆ.
ಕಾರ್ಯಕ್ರಮಗಳು ನಡೆಯುವ ಸಮಯ ಕುದುರೆಮುಖ ಜಂಕ್ಷನ್ನಿನಿಂದ ಪಣಂಬೂರು ಜಂಕ್ಷನ್ ವರೆಗೆ ಮತ್ತು ಡಿಕ್ಸಿ ಕ್ರಾಸ್ ನಿಂದ ಪಣಂಬೂರು ಬೀಚ್ ವರೆಗಿನ ರಸ್ತೆಯ ಎರಡು ಬದಿಗಳಲ್ಲಿ ಯಾವುದೇ ವಾಹನಗಳನ್ನು ಪಾರ್ಕ್ ಮಾಡುವಂತಿಲ್ಲ.
ನಿಗದಿ ಪಡಿಸಿರುವ ಪಾರ್ಕಿಂಗ್ ಸ್ಥಳಗಳು :
1. ಕೆ.ಕೆ ಗೇಟ್ ಟ್ರಕ್ ಯಾರ್ಡ್ ಪಾರ್ಕಿಂಗ್
2. ಪಣಂಬೂರು ಬೀಚ್ ಪಾರ್ಕಿಂಗ್
ವಿಶೇಷ ಸೂಚನೆ :
ಕಾರ್ಯಕ್ರಮಗಳಿಗೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ನಿಗಧಿಪಡಿಸಿದ ಸ್ಥಳಗಳಲ್ಲಿ ಮಾತ್ರ ನಿಲ್ಲಿಸುವುದು.
ಕಾರ್ಯಕ್ರಮದ ಮಾರ್ಗದಲ್ಲಿ ವಾಹನ ನಿಲುಗಡೆಯ ಸೂಚನಾ ಫಲಕಗಳನ್ನು ಅಳವಡಿಸಿದ್ದು, ಮಾರ್ಗಸೂಚಿಯನ್ನು ಅನುಸರಿಸುವುದು ಹಾಗೂ ಕಾರ್ಯಕ್ರಮ ಪ್ರಾರಂಭವಾಗುವ ಮುಂಚಿತವಾಗಿ ಬಂದು ನಿರ್ದಿಷ್ಟ ಸ್ಥಳದಲ್ಲಿ ನಿಲ್ಲಿಸುವುದು.
ಕಾರ್ಯಕ್ರಮಗಳ ಸಮಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾದ್ಯತೆಗಳು ಇರುವುದರಿಂದ ಸಾರ್ವಜನಿಕರು ರಸ್ತೆಯಲ್ಲಿ ಅನಾವಶ್ಯಕವಾಗಿ ನಿಲ್ಲದೇ ಶಿಸ್ತನ್ನು ಕಾಪಾಡುವುದು ಮತ್ತು ಪೆÇಲೀಸರು ನೀಡುವ ಸೂಚನೆಗಳನ್ನು ಪಾಲಿಸುವಂತೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.














0 comments:
Post a Comment