ಮಂಗಳೂರು, ಜನವರಿ 21, 2026 (ಕರಾವಳಿ ಟೈಮ್ಸ್) : ಬೆಳ್ಳಾರೆ ಪೆÇಲೀಸ್ ಠಾಣಾ ಅಪರಾಧ ಕ್ರಮಾಂಕ 42/2020, ಕಲಂ 354, 506 ಐಪಿಸಿ ಕಲಂ 10 ಪೋಕ್ಸೋ ಆಕ್ಟ್-2012 ಪ್ರಕರಣದ ಆರೋಪಿ ಸೆಲ್ವ ಕುಮಾರ್ ಎಂಬಾತನಿಗೆ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳೂರು (ಸಿಟ್ಟಿಂಗ್ ಪುತ್ತೂರು) ಇಲ್ಲಿ ವಿಚಾರಣೆ ನಡೆದು, ನ್ಯಾಯಾಧೀಶರಾದ ಸರಿತಾ ಡಿ. ಅವರು ಆರೋಪಿಗೆ 5 ವರ್ಷಗಳ ಸಾಧಾರಣ ಶಿಕ್ಷೆಯ ಜೊತೆಗೆ 20 ಸಾವಿರ ರೂಪಾಯಿ ದಂಡ (ದಂಡದ ಮೊತ್ತವನ್ನು ಪಾವತಿಸದಿದ್ದಲ್ಲಿ 6 ತಿಂಗಳ ಸಾಧಾರಣ ಶಿಕ್ಷೆ) ವಿಧಿಸಿ ತೀರ್ಪು ನೀಡಿದ್ದಾರೆ.
ಬೆಳ್ಳಾರೆ ಪೆÇಲೀಸ್ ಠಾಣಾ ಅಂದಿನ ತನಿಖಾಧಿಕಾರಿ ಅಂಜನೇಯ ರೆಡ್ಡಿ ಅವರು ಅಂತಿಮ ವರದಿ ಸಲ್ಲಿಸಿದ್ದು, ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಪುಷ್ಪರಾಜ್ ಅವರು ಸಮರ್ಥವಾಗಿ ವಾದ ಮಂಡಿಸಿರುತ್ತಾರೆ.












0 comments:
Post a Comment