ಮಂಗಳೂರು, ಜನವರಿ 01, 2026 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ವಾಹನ ಚಾಲಕರ ಕೇಂದ್ರ ಸಂಘದ ವಾರ್ಷಿಕ ಮಹಾಸಭೆ ತಿಲಕ್ ಪ್ರಶಾಂತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರರ ಸಂಘದ ಸಮುದಾಯ ಭವನದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ರಾಜ್ಯ ಸರಕಾರಿ ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಪ್ರಕಾಶ್ ನಾಯಕ್ ಮಾತನಾಡಿ, ದೃಢ ಚಿತ್ತ ಸೇವಾ ಮನೋಭಾವನೆಯಿಂದ, ಒಗ್ಗಟ್ಟಿನಿಂದ ಸೇವೆ ನಿರ್ವಹಿಸಿದಲ್ಲಿ ಸಂಘಟನೆಯು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ನುಡಿದರು.
ಸಂಘದ ಮಾಜಿ ಅಧ್ಯಕ್ಷÀ ಬಿ. ವಿಶ್ವನಾಥ ಶೆಟ್ಟಿ ಮಾತನಾಡಿ ಜಿಲ್ಲಾ ಸಂಘದೊಂದಿಗೆ ವಿಲೀನಗೊಳಿಸುವ ಮುಂದೆ ಕ್ರಮಕೈಗೊಳ್ಳಲಾಗುತ್ತದೆ ಎಂದರು.
ಸಂಘದ ಕಾರ್ಯದರ್ಶಿ ಎಂ. ಸತ್ಯನಾರಾಯಣ ಕಾಮತ್ ವರದಿ ವಾಚಿಸಿದರು. ಖಜಾಂಚಿ ಪುರುಷೋತ್ತಮ ಲೆಕ್ಕಪತ್ರ ಮಂಡಿಸಿ ಸಭೆಯ ಸರ್ವಾನುಮತದ ಅನುಮೋದನೆ ಪಡೆದರು. ವಾಹನ ಚಾಲಕರಾಗಿ ನಿವೃತ್ತಿ ಹೊಂದಿದ ಆರೋಗ್ಯ ಇಲಾಖೆಯ ವಾಹನ ಚಾಲಕ ಮಾಧವ ಕೆ. ಮತ್ತು ಸಂಘದ ಆಂತರಿಕ ಲೆಕ್ಕ ತಪಾಸಣೆಗಾರ ಬಿ. ಮನಮೋಹನ್ ರಾವ್ ಇವರನ್ನು ಸನ್ಮಾನಿಸಲಾಯಿತು. £ವೇಶನ ಸಮಿತಿ ಅಧ್ಯಕ್ಷÀ ರಾಬರ್ಟ್ ಪ್ಯಾಸ್ ಉಪಸ್ಥಿತರಿದ್ದರು. ನಿವೇಶನ ಸಮಿತಿ ಕಾರ್ಯದರ್ಶಿ ಬಾಲಕೃಷ್ಣ ಕೆ. ವಂದಿಸಿ, ಬಿ. ಮನಮೋಹನ್ ರಾವ್ ನಿರೂಪಿಸಿದರು.


















0 comments:
Post a Comment