ಬಂಟ್ವಾಳ, ಜನವರಿ 31, 2026 (ಕರಾವಳಿ ಟೈಮ್ಸ್) : ಕಾರು ಡಿಕ್ಕಿ ಹೊಡೆದು ಮಹಿಳೆ ಗಾಯಗೊಂಡ ಘಟನೆ ಪಾಣೆಮಂಗಳೂರು ಗ್ರಾಮದ ಮೆಲ್ಕಾರ್ ಸಮೀಪದ ಗುಡ್ಡೆಅಂಗಡಿ ಎಂಬಲ್ಲಿ ಜನವರಿ 30 ರಂದು ಸಂಭವಿಸಿದೆ.
ಗಾಯಗೊಂಡ ಮಹಿಳೆಯನ್ನು ಮೆಲ್ಕಾರ್ ನಿವಾಸಿ ಶೋಭಾ (30) ಎಂದು ಹೆಸರಿಸಲಾಗಿದೆ. ಇವರು ಶುಕ್ರವಾರ ಗುಡ್ಡೆಅಂಗಡಿ ಆರ್ ಆರ್ ಮಿಲ್ ಬಳಿ ತಂದೆಯವರಿಗೆ ಮದ್ದು ತರಲು ಮೆಲ್ಕಾರಿಗೆ ಹೋಗಿ ವಾಪಾಸು ಬರುತ್ತಿದ್ದ ವೇಳೆ ಮೆಲ್ಕಾರ್ ಜಂಕ್ಷನ್ನಿನಿಂದ ಆಸಿಫ್ ಎಂಬವರು ಚಲಾಯಿಸಿಕೊಂಡು ಬಂದ ಕಾರು ಇವರಿಗೆ ಡಿಕ್ಕಿ ಹೊಡೆದು ಬಳಿಕ ರಸ್ತೆ ಬದಿಯಲ್ಲಿ ನಿಂತಿದ್ದ ಬೈಕಿಗೂ ಡಿಕ್ಕಿಯಾಗಿ ತಿರುಗಿ ನಿಂತಿದೆ.
ಅಪಘಾತದಿಂದ ರಸ್ತೆಗೆಸೆಯಲ್ಟಟ್ಟ ಶೋಭಾ ಅವರ ಮೈ ಕೈಗೆ ಗಾಯಗಳಾಗಿವೆ. ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಅಪಘಾತದಿಂದ ಬೈಕ್ ಕೂಡಾ ಜಖಂಗೊಂಡಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment