ಜನವರಿ 31 ರಿಂದ ಫೆಬ್ರವರಿ 4ರವರೆಗೆ ಕಾಗದ ರಹಿತ ನೋದಣಿ ಬಗ್ಗೆ ಜಿಲ್ಲೆಯಾದ್ಯಂತ ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ತರಬೇತಿ - Karavali Times ಜನವರಿ 31 ರಿಂದ ಫೆಬ್ರವರಿ 4ರವರೆಗೆ ಕಾಗದ ರಹಿತ ನೋದಣಿ ಬಗ್ಗೆ ಜಿಲ್ಲೆಯಾದ್ಯಂತ ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ತರಬೇತಿ - Karavali Times

728x90

29 January 2026

ಜನವರಿ 31 ರಿಂದ ಫೆಬ್ರವರಿ 4ರವರೆಗೆ ಕಾಗದ ರಹಿತ ನೋದಣಿ ಬಗ್ಗೆ ಜಿಲ್ಲೆಯಾದ್ಯಂತ ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ತರಬೇತಿ

ಮಂಗಳೂರು, ಜನವರಿ 29, 2026 (ಕರಾವಳಿ ಟೈಮ್ಸ್) : ಕಾಗದರಹಿತ ನೋಂದಣಿ (ಪೇಪರ್ ಲೆಸ್ ರಿಜಿಸ್ಟ್ರೇಶನ್) ಕುರಿತು ತರಬೇತಿಯನ್ನು ಜಿಲ್ಲಾದ್ಯಂತ ಆಯಾ ಉಪನೋಂದಣಿ ಕಛೇರಿಗಳ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದೆ. 

ಜನವರಿ 31 ರಂದು ಬೆಳಿಗ್ಗೆ ಬೆಳ್ತಂಗಡಿ ಉಪನೋಂದಣಿ ಕಛೇರಿ, ಮಧ್ಯಾಹ್ನ ವಿಟ್ಲ ಹಾಗೂ ಬಂಟ್ವಾಳ ಉಪನೋಂದಣಿ ಕಛೇರಿ, ಫೆಬ್ರವರಿ 1 ರಂದು ಬೆಳಿಗ್ಗೆ ಪುತ್ತೂರು ಉಪನೋಂದಣಿ ಕಛೇರಿ,  ಫೆಬ್ರವರಿ 2 ರಂದು  ಬೆಳಿಗ್ಗೆ ಮೂಡಬಿದ್ರೆ ಉಪನೋಂದಣಿ ಕಛೇರಿ, ಮಧ್ಯಾಹ್ನ ಮುಲ್ಕಿ ಉಪನೋಂದಣಿ ಕಛೇರಿ, ಫೆಬ್ರವರಿ 3 ಬೆಳಿಗ್ಗೆ ಮಂಗಳೂರು ನಗರ ಹಾಗೂ ತಾಲೂಕು ಉಪನೋಂದಣಿ ಕಛೇರಿ, ಫೆಬ್ರವರಿ 4 ಮಧ್ಯಾಹ್ನ ಸುಳ್ಯ ಉಪನೋಂದಣಿ ಕಛೇರಿಗಳಲ್ಲಿ ತರಬೇತಿ ನಡೆಯಲಿದೆ.

ದಸ್ತಾವೇಜು ಬರಹಗಾರರು, ವಕೀಲರು ಕರ್ನಾಟಕ ಒನ್, ಮಂಗಳೂರು ಒನ್, ಗ್ರಾಮ ಒನ್, ಮತ್ತು ಬಾಪೂಜಿ ಸೇವಾ ಕೇಂದ್ರದ ಸಿಬ್ಬಂದಿಗಳು ಈ ತರಬೇತಿಯಲ್ಲಿ ಭಾಗವಹಿಸಬಹುದು. ತರಬೇತಿ ಪಡೆಯುವ ಸ್ಥಳದ ಬಗ್ಗೆ ಉಪನೋಂದಣಿ ಅಧಿಕಾರಿಯವರಲ್ಲಿ ವಿಚಾರಿಸಿ ತರಬೇತಿಗೆ ಹಾಜರಾಗಬಹುದು ಎಂದು ಜಿಲ್ಲಾ ನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಜನವರಿ 31 ರಿಂದ ಫೆಬ್ರವರಿ 4ರವರೆಗೆ ಕಾಗದ ರಹಿತ ನೋದಣಿ ಬಗ್ಗೆ ಜಿಲ್ಲೆಯಾದ್ಯಂತ ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ತರಬೇತಿ Rating: 5 Reviewed By: karavali Times
Scroll to Top