ಮಂಗಳೂರು, ಫೆಬ್ರವರಿ 27, 2026 (ಕರಾವಳಿ ಟೈಮ್ಸ್) : ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಅವರ ನೇತೃತ್ವದಲ್ಲಿ 11ನೇ ವರ್ಷದ ಇಫ್ತಾರ್ ಕೂಟವು ಮಾರ್ಚ್ 7 ರಂದು ಶನಿವಾರ ಮಂಗಳೂರು ನಗರದ ಜೆಪ್ಪು-ಮೋರ್ಗನ್ಸ್ ಗೇಟ್ ಪಾಲೆಮಾರ್ ಗಾರ್ಡನ್ನಿನಲ್ಲಿ ನಡೆಯಲಿದ್ದು, ಈ ಪ್ರಯುಕ್ತ ಶಾಸಕರ ಗೃಹ ಕಛೇರಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಕಳೆದ 10 ವರ್ಷಗಳಿಂದ ಸರ್ವಧರ್ಮೀಯರಿಗೆ ಗೌರವ ಕೊಡುವ ನಿಟ್ಟಿನಲ್ಲಿ ದೀಪಾವಳಿ, ಕ್ರಿಸ್ಮಸ್ ಹಾಗೂ ರಂಜಾನ್ ಹಬ್ಬವನ್ನುಸಾರ್ವಜನಿಕವಾಗಿ ಆಚರಿಸುತ್ತಾ ಬರಲಾಗುತ್ತಿದೆ. ಇದೀಗ ಮಾರ್ಚ್ 7 ರಂದು ಸೌಹಾರ್ದ ಇಫ್ತಾರ್ ಕೂಟ ಆಯೋಜಿಸಲಾಗುತ್ತಿದೆ.
ಸಂಜೆ 5 ಗಂಟೆಯಿಂದ ಆರಂಭವಾಗುವ ಕಾರ್ಯಕ್ರಮದಲ್ಲಿ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಗಳು, ಮುಸ್ಲಿಂ ಧರ್ಮಗುರು ಕುದ್ರೋಳಿ ನಡುಪಲ್ಲಿಯ ಖತೀಬ್ ರಿಯಾಝ್ ಫೈಝಿ ಕಕ್ಕಿಂಜೆ, ಕ್ರೈಸ್ತ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ರೆ ಫಾ ಜೆ ಬಿ ಸಲ್ದಾನಾ, ಮಂಗಳೂರು ವಿಶ್ವವಿದ್ಯಾನಿಲಯ ಉಪಕುಲಪತಿ ಪೆÇ್ರ ಪಿ ಎಲ್ ಧರ್ಮ ಅವರು ಭಾಗವಹಿಸಲಿದ್ದು, ಸರ್ವಧರ್ಮದ ಸಂದೇಶ ಸಾರುವರು.
ಬಳಿಕ ಸಾರ್ವಜನಿಕ ಇಫ್ತಾರ್ ಕೂಟ ಏರ್ಪಾಡು ಮಾಡಲಾಗಿದೆ. ಸರ್ವಧರ್ಮದ ಸಮಾರಂಭವು ಸಾರ್ವಜನಿಕರಲ್ಲಿ ಸಹೋದರತ್ವ ಹಾಗೂ ಸಮಾನತೆ ಸಂದೇಶವನ್ನು ಮಾಡಬೇಕಾಗಿದ್ದು ಎಲ್ಲಾ ಧರ್ಮಗಳ ಹಬ್ಬವನ್ನು ಅಚರಣೆ ಮಾಡುವ ಮೂಲಕ ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಾಗಿ ಬದುಕುವಂತೆ ಶ್ರಮಿಸಬೇಕು ಎಂದು ಐವನ್ ಡಿಸೋಜಾ ಇದೇ ವೇಳೆ ಕರೆ ನೀಡಿದರು.
ಸಭೆಯಲ್ಲಿ ಮಾಜಿ ಕಾಪೆರ್Çೀರೇಟರ್ ನಾಗೇಂದ್ರ ಕುಮಾರ್, ಅಪ್ಪಿ ಲತ, ಭಾಸ್ಕರ್ ರಾವ್, ಸತೀಶ್ ಪೆಂಗಲ್, ಪ್ರಮುಖರಾದ ಅಮೃತ್ ಕದ್ರಿ, ಮನುರಾಜ್ ಎಂ ನ್, ಬಾಸಿಲ್ ರೋಡ್ರಿಗಸ್, ಆನಂದ್ ಸೋನ್ಸ್, ವಸಂತ್ ಶೆಟ್ಟಿ, ಗುಲಾಂ ಹೆಜಮಾಡಿ, ಡಿಂಪಲ್, ಜೇಮ್ಸ್ ಪ್ರವೀಣ್, ಹೈದರ್ ಬೋಳಾರ್, ನವಾಜ್ ಜೆಪ್ಪು, ಅಶ್ರಫ್ ಬೆಂಗ್ರೆ, ಬಶೀರ್ ಹಾಗೂ ಕ್ಲೈಡ್ ಮೊದಲಾದವರು ಭಾಗವಹಿಸಿದ್ದರು.















0 comments:
Post a Comment