ಸಮಯಪ್ರಜ್ಞೆಯಿಂದ ಸಂಭಾವ್ಯ ಅಪಾಯ ತಪ್ಪಿಸಿ ಮುಖ್ಯಮಂತ್ರಿ ಶ್ಲಾಘನೆಗೆ ಪಾತ್ರನಾದ 5ನೇ ತರಗತಿ ವಿದ್ಯಾರ್ಥಿಗೆ ಬಂಟ್ವಾಳ ತಾಲೂಕಾಡಳಿತ ವತಿಯಿಂದ ಗೌರವ - Karavali Times ಸಮಯಪ್ರಜ್ಞೆಯಿಂದ ಸಂಭಾವ್ಯ ಅಪಾಯ ತಪ್ಪಿಸಿ ಮುಖ್ಯಮಂತ್ರಿ ಶ್ಲಾಘನೆಗೆ ಪಾತ್ರನಾದ 5ನೇ ತರಗತಿ ವಿದ್ಯಾರ್ಥಿಗೆ ಬಂಟ್ವಾಳ ತಾಲೂಕಾಡಳಿತ ವತಿಯಿಂದ ಗೌರವ - Karavali Times

728x90

15 August 2026

ಸಮಯಪ್ರಜ್ಞೆಯಿಂದ ಸಂಭಾವ್ಯ ಅಪಾಯ ತಪ್ಪಿಸಿ ಮುಖ್ಯಮಂತ್ರಿ ಶ್ಲಾಘನೆಗೆ ಪಾತ್ರನಾದ 5ನೇ ತರಗತಿ ವಿದ್ಯಾರ್ಥಿಗೆ ಬಂಟ್ವಾಳ ತಾಲೂಕಾಡಳಿತ ವತಿಯಿಂದ ಗೌರವ

ಬಂಟ್ವಾಳ, ಆಗಸ್ಟ್ 15, 2026 (ಕರಾವಳಿ ಟೈಮ್ಸ್) : ತನ್ನ ಸಮಯಪ್ರಜ್ಞೆ ಹಾಗೂ ಸಕಾಲಿಕ ಕಾರ್ಯಾಚರಣೆಯ ಮೂಲಕ ಬಿಸಿಯೂಟ ಕಾರ್ಮಿಕ ಮಹಿಳೆಯನ್ನು ಸಂಭಾವ್ಯ ವಿದ್ಯುತ್ ಅವಘಡದಿಂದ ರಕ್ಷಿಸಿ ವ್ಯಾಪಕ ಪ್ರಶಂಸೆಗೆ ಪಾತ್ರನಾಗಿದ್ದಲ್ಲದೆ, ರಾಜ್ಯದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಂದಲೂ ಶ್ಲಾಘನೆಗೆ ಒಳಗಾಗಿದ್ದ ತಾಲೂಕಿನ ನರಿಕೊಂಬು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಮನ್ವಿತ್ ಎಂಬ ಬಾಲಕನನ್ನು ಶನಿವಾರ ಬಿ ಸಿ ರೋಡಿನಲ್ಲಿ ನಡೆದ ದೇಶದ 80ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ತಾಲೂಕಾಡಳಿತ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. 

ಬಾಲಕನ ಸಮಯಪ್ರಜ್ಞೆ ಹಾಗೂ ಸಮಯೋಚಿತ ನಿರ್ಧಾರಕ್ಕೆ ಶಾಸಕ ಯು ರಾಜೇಶ್ ನಾಯಕ್ ಅವರು ಮೆಚ್ಚುಗೆ ವ್ಯಕ್ತಪಡಿಸಿ ಉತ್ತಮ ಭವಿಷ್ಯಕ್ಕಾಗಿ ಹಾರೈಸಿದರು. ಈ ಸಂದರ್ಭ ತಾಲೂಕು ದಂಡಾಧಿಕಾರಿ ಜಿ ಮಂಜುನಾಥ್, ತಾ ಪಂ ಇಒ ಸಚಿನ್ ಕುಮಾರ್, ಬುಡಾ ಅಧ್ಯಕ್ಷ ಬೇಬಿ ಕುಂದರ್, ಗ್ಯಾರಂಟಿ ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಪ್ಪ, ವಿದ್ಯಾರ್ಥಿ ಹೆತ್ತವರಾದ ಸುರೇಶ್ ಹಾಗೂ ಜಯಂತಿ ಉಪಸ್ಥಿತರಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಸಮಯಪ್ರಜ್ಞೆಯಿಂದ ಸಂಭಾವ್ಯ ಅಪಾಯ ತಪ್ಪಿಸಿ ಮುಖ್ಯಮಂತ್ರಿ ಶ್ಲಾಘನೆಗೆ ಪಾತ್ರನಾದ 5ನೇ ತರಗತಿ ವಿದ್ಯಾರ್ಥಿಗೆ ಬಂಟ್ವಾಳ ತಾಲೂಕಾಡಳಿತ ವತಿಯಿಂದ ಗೌರವ Rating: 5 Reviewed By: karavali Times
Scroll to Top