ಅಕ್ರಮ ಕೋಳಿ ಅಂಕದ ಸ್ಥಳಕ್ಕೆ ಕಡಬ ಪೊಲೀಸರ ದಾಳಿ : ಓರ್ವ ವಶಕ್ಕೆ - Karavali Times ಅಕ್ರಮ ಕೋಳಿ ಅಂಕದ ಸ್ಥಳಕ್ಕೆ ಕಡಬ ಪೊಲೀಸರ ದಾಳಿ : ಓರ್ವ ವಶಕ್ಕೆ - Karavali Times

728x90

9 November 2026

ಅಕ್ರಮ ಕೋಳಿ ಅಂಕದ ಸ್ಥಳಕ್ಕೆ ಕಡಬ ಪೊಲೀಸರ ದಾಳಿ : ಓರ್ವ ವಶಕ್ಕೆ

ಕಡಬ, ನವಂಬರ್ 10, 2026 (ಕರಾವಳಿ ಟೈಮ್ಸ್) : ತಾಲೂಕಿನ ಚಾರ್ವಾಕ ಗ್ರಾಮದ ಬೀರೋಳಿಗೆ ಎಂಬಲ್ಲಿನ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಅಕ್ರಮ ಕೋಳಿ ಅಂಕಕ್ಕೆ ಕಡಬ ಪೊಲೀಸರು ದಾಳಿ ನಡೆಸಿ ಓರ್ವನನ್ನು ಬಂಧಿಸಿದ ಘಟನೆ ನ 9 ರಂದು ಸಂಜೆ ವೇಳೆ ನಡೆದಿದೆ. 

ಬಂಧಿತ ಆರೋಪಿಯನ್ನು ಚಾರ್ಚಾಕ ನಿವಾಸಿ ಬಾಲಕೃಷ್ಣ (46) ಎಂದು ಹೆಸರಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಕಡಬ ಪೊಲೀಸ್ ಠಾಣಾ ಪ್ರಭಾರ ಪಿಎಸ್ಸೈ ಸಂತೋಷ್ ಬಿ ಪಿ ಅವರ ನೇತೃತ್ವದ ಪೊಲೀಸರು ಈ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದವರು ಓಡಿ ಪರಾರಿಯಾಗಿದ್ದು, ಈ ಪೈಕಿ ಬಾಲಕೃಷ್ಣ ಎಂಬಾತ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಆತನ ಬಳಿಯಿಂದ ಜೂಜಾಟದಿಂದ ಗಳಿಸಿದ್ದ 1,030/- ರೂಪಾಯಿ ನಗದು ಹಾಗೂ ಸ್ಥಳದಲ್ಲಿದ್ದ 5 ಅಂಕದ ಕೋಳಿಗಳನ್ನು ಹಾಗೂ ಕೋಳಿ ಅಂಕಕ್ಕೆ ಬಳಸುವ ಕತ್ತಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಈ ಬಗ್ಗೆ ಕಡಬ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಅಕ್ರಮ ಕೋಳಿ ಅಂಕದ ಸ್ಥಳಕ್ಕೆ ಕಡಬ ಪೊಲೀಸರ ದಾಳಿ : ಓರ್ವ ವಶಕ್ಕೆ Rating: 5 Reviewed By: karavali Times
Scroll to Top