ಮಾರ್ಚ್ 5 ರಂದು ಮಂಗಳೂರು ಅಂಚೆ ಅದಾಲತ್ - Karavali Times ಮಾರ್ಚ್ 5 ರಂದು ಮಂಗಳೂರು ಅಂಚೆ ಅದಾಲತ್ - Karavali Times

728x90

26 February 2020

ಮಾರ್ಚ್ 5 ರಂದು ಮಂಗಳೂರು ಅಂಚೆ ಅದಾಲತ್



ಮಂಗಳೂರು (ಕರಾವಳಿ ಟೈಮ್ಸ್) : ಮಂಗಳೂರು ಅಂಚೆ ವಿಭಾಗದ ತ್ರೈಮಾಸಿಕ ಅದಾಲತ್ ಮಾರ್ಚ್ 5 ರಂದು ಬೆಳಿಗ್ಗೆ 11 ಗಂಟೆಗೆ ಮಂಗಳೂರು-ಬಲ್ಮಠದ ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಛೇರಿಯಲ್ಲಿ ನಡೆಯಲಿದೆ.

ಮಂಗಳೂರು ಅಂಚೆ ವಿಭಾಗಕ್ಕೆ ಸಂಬಂಧಪಟ್ಟ ಎಲ್ಲಾ ರೀತಿಯ ಸಾರ್ವಜನಿಕ ಕುಂದು-ಕೊರತೆಗಳನ್ನು, ತಕರಾರು, ತಕರಾರುಗಳನ್ನು ಪರಿಶೀಲಿಸಲಾಗುವುದು. ಸಾರ್ವಜನಿಕರು ಮಂಗಳೂರು ಅಂಚೆ ವಿಭಾಗಕ್ಕೆ ಸಂಬಂಧಪಟ್ಟ ದೂರುಗಳನ್ನು ಪತ್ರಮುಖೇನ ‘ಅಂಚೆ ಅದಾಲತ್’ ತಲೆ ಬರಹದಡಿ ಮಾರ್ಚ್ 4 ರ ಒಳಗೆ ಹಿರಿಯ ಅಂಚೆ ಅಧೀಕ್ಷಕರು, ಮಂಗಳೂರು ವಿಭಾಗ, ಬಲ್ಮಠ, ಮಂಗಳೂರು-575002 ವಿಳಾಸಕ್ಕೆ ಅಥವಾ ವಾಟ್ಸಪ್ ಸಂಖ್ಯೆ 9448291072 ಗೆ ಕಳುಹಿಸಬಹುದು. ಅಲ್ಲದೆ ಅದೇ ದಿನ ಬೆಳಿಗ್ಗೆ 11 ರಿಂದ 12 ಗಂಟೆಯ ಒಳಗಡೆ ಸ್ಥಿರ ದೂರವಾಣಿ ಸಂಖ್ಯೆ 0824-2216700 ಗೆ ನೇರವಾಗಿ ಸಂಪರ್ಕಿಸಬಹುದು. ದೂರುಗಳು ಮಂಗಳೂರು ಅಂಚೆ ವಿಭಾಗಕ್ಕೆ ಸಂಬಂಧಪಟ್ಟದ್ದವುಗಳಾಗಿರಬೇಕು ಎಂದು ಮಂಗಳೂರು ಅಂಚೆ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.









  • Blogger Comments
  • Facebook Comments

0 comments:

Post a Comment

Item Reviewed: ಮಾರ್ಚ್ 5 ರಂದು ಮಂಗಳೂರು ಅಂಚೆ ಅದಾಲತ್ Rating: 5 Reviewed By: karavali Times
Scroll to Top