ನೇರಳಕಟ್ಟೆ : ಶಾಲಾ ಶತಮಾನೋತ್ಸವ ಸಮಿತಿ ಸಭೆ - Karavali Times ನೇರಳಕಟ್ಟೆ : ಶಾಲಾ ಶತಮಾನೋತ್ಸವ ಸಮಿತಿ ಸಭೆ - Karavali Times

728x90

23 February 2020

ನೇರಳಕಟ್ಟೆ : ಶಾಲಾ ಶತಮಾನೋತ್ಸವ ಸಮಿತಿ ಸಭೆ



ವಿಟ್ಲ (ಕರಾವಳಿ ಟೈಮ್ಸ್) : ನೇರಳಕಟ್ಟೆಯ ದ.ಕ.ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ಸಮಿತಿ ರಚನಾ ಸಭೆ ಫೆ 23 ರಂದು ಭಾನುವಾರ ಇಲ್ಲಿನ ಉರ್ದಿಲಗುತ್ತು ಪಟೇಲ್ ಕೆ. ಇಂದುಹಾಸ ರೈ ಸಭಾಂಗಣದಲ್ಲಿ ನಡೆಯಿತು.

    ಉರ್ದಿಲಗುತ್ತು ಲಕ್ಷ್ಮಿ ಕೆ ಹೆಗ್ಡೆ ಸಭಾದ್ಯಕ್ಷತೆ ವಹಿಸಿದ್ದರು.  ಮಜಿ ಶಾಲಾ ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ, ನೆಟ್ಲಮುಡ್ನೂರು ಗ್ರಾ.ಪಂ. ಅದ್ಯಕ್ಷ ವಿಜಯ, ಶಾಲಾಭಿವೃದ್ದಿ ಸಮಿತಿ ಅದ್ಯಕ್ಷ  ರೋಹಿತಾಶ್ವ, ಹಮೀದ್ ಪರ್ಲೊಟ್ಟು ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.

    ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಸ್ವಾಗತಿಸಿ, ಸಹ ಶಿಕ್ಷಕಿ ಗೀತಾ ಕೆ ವಂದಿಸಿದರು, ಶಿಕ್ಷಕ ಸುಧಾಕರ ಕಾರ್ಯಕ್ರಮ ನಿರೂಪಿಸಿದರು.  

ಶತಮಾನೋತ್ಸವ ಸಮಿತಿ ಪದಾಧಿಕಾರಿಗಳು 


    ಅಧ್ಯಕ್ಷರಾಗಿ ಉರ್ದಿಲ ಗುತ್ತು ರಾಮ್ ಪ್ರಸಾದ್ ರೈ, ಕಾರ್ಯಾಧ್ಯಕ್ಷರಾಗಿ  ನಿರಂಜನ್ ರೈ ಕುರ್ಲೆತ್ತಿಮಾರ್,
ಉಪಾಧ್ಯಕ್ಷರಾಗಿ ಶ್ರೀಧರ ರೈ, ಸುರೇಶ್ ರೈ, ಡಿ. ತನಿಯಪ್ಪ ಗೌಡ, ಮತ್ತು ಬೇಬಿ ನಾಯ್ಕ, ಕಾರ್ಯದರ್ಶಿಯಾಗಿ  ಶಾಲಾ ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಕೆ.ಎಸ್., ಜೊತೆ ಕಾರ್ಯದರ್ಶಿಯಾಗಿ ಪ್ರೇಮನಾಥ ಶೆಟ್ಟಿ, ಗೌರವ ಸಲಹೆಗಾರ ಗೋಪಾಲಕೃಷ್ಣ ನೇರಳಕಟ್ಟೆ, ಕೋಶಾಧಿಕಾರಿಯಾಗಿ ವಿಶುಕುಮಾರ್ ಅವಿರೋಧವಾಗಿ ಆಯ್ಕೆಯಾದರು.

ಹಿರಿಯ ವಿಧ್ಯಾರ್ಥಿ ಸಂಘದ ಪದಾಧಿಕಾರಿಗಳು


    ಅಧ್ಯಕ್ಷರಾಗಿ  ವಿಠ್ಠಲ ನಾಯ್ಕ, ಉಪಾಧ್ಯಕ್ಷರಾಗಿ ಅಶೋಕ್ ರೈ, ಪ್ರೇಮಾ, ರಝಾಕ್ ಸಾಹೇಬ್ ನೇರಳಕಟ್ಟೆ, ಪ್ರದಾನ ಕಾರ್ಯದರ್ಶಿಯಾಗಿ ಅಬ್ದುಲ್ ಲತೀಫ್ ನೇರಳಕಟ್ಟೆ, ಜತೆ ಕಾರ್ಯದರ್ಶಿಯಾಗಿ ಪ್ರಕಾಶ್ ರೈ, ಗೌರವಾಧ್ಯಕ್ಷರಾಗಿ ಶ್ರೀನಿವಾಸ ಗೌಡ ಆಯ್ಕೆಗೊಂಡರು.









  • Blogger Comments
  • Facebook Comments

0 comments:

Post a Comment

Item Reviewed: ನೇರಳಕಟ್ಟೆ : ಶಾಲಾ ಶತಮಾನೋತ್ಸವ ಸಮಿತಿ ಸಭೆ Rating: 5 Reviewed By: lk
Scroll to Top