ಇಂದು ಮಧ್ಯರಾತ್ರಿಯಿಂದಲೇ ಇಡೀ ದೇಶ ಸ್ಥಬ್ಧ : ಪ್ರಧಾನಿ ಮೋದಿ ಅಧಿಕೃತ ಘೋಷಣೆ - Karavali Times ಇಂದು ಮಧ್ಯರಾತ್ರಿಯಿಂದಲೇ ಇಡೀ ದೇಶ ಸ್ಥಬ್ಧ : ಪ್ರಧಾನಿ ಮೋದಿ ಅಧಿಕೃತ ಘೋಷಣೆ - Karavali Times

728x90

24 March 2020

ಇಂದು ಮಧ್ಯರಾತ್ರಿಯಿಂದಲೇ ಇಡೀ ದೇಶ ಸ್ಥಬ್ಧ : ಪ್ರಧಾನಿ ಮೋದಿ ಅಧಿಕೃತ ಘೋಷಣೆ



21 ದಿನ ಭಾರತ ಸಂಪೂರ್ಣ ಲಾಕ್ ಡೌನ್

21 ದಿನ ಯಶಸ್ವಿಯಾಗದಿದ್ರೆ, ದೇಶ 21 ವರ್ಷ ಹಿಂದೆ ಹೋಗುತ್ತೆ


ನವದೆಹಲಿ (ಕರಾವಳಿ ಟೈಮ್ಸ್) : ಕೊರೊನಾ ವೈರಸ್ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಮಧ್ಯರಾತ್ರಿಯಿಂದಲೇ ಇಡೀ ಭಾರತವನ್ನೇ ಲಾಕ್‍ಡೌನ್ ಮಾಡಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಇಂದು ಮಧ್ಯರಾತ್ರಿಯಿಂದಲೇ ಭಾರತ ಸಂಪೂರ್ಣ ಲಾಕ್‍ಡೌನ್ ಆಗಲಿದೆ. ಈ ಲಾಕ್‍ಡೌನ್ ನಿಂದಾಗುವ ನಷ್ಟವನ್ನು ದೇಶ ಭರಿಸಬೇಕಿದೆ. ಆದ್ರೆ ಇಂದು ದೇಶದ ಪ್ರತಿಯೊಬ್ಬರ ಜೀವದ ರಕ್ಷಣೆ ನಮ್ಮ ಕರ್ತವ್ಯವಾಗಿದೆ. ಇಂದು ನೀವು ದೇಶದ ಯಾವುದೇ ಭಾಗದಲ್ಲಿದ್ದರೂ, ಅಲ್ಲಿಯೇ ಉಳಿದುಕೊಳ್ಳಬೇಕು. ಮುಂದಿನ ಮೂರು ವಾರಗಳ ಕಾಲ ಭಾರತ ಸಂಪೂರ್ಣ ಲಾಕ್‍ಡೌನ್ ಆಗಲಿದೆ.

ಒಂದು ವೇಳೆ 21 ದಿನದಲ್ಲಿ ನಾವು ಕೊರೊನಾ ವಿರುದ್ಧ ಗೆಲುವು ಸಾಧಿಸದಿದ್ದರೆ, 21 ವರ್ಷಗಳ ಹಿಂದೆ ಭಾರತ ಹೋಗಲಿದೆ. 21 ದಿನ ಮನೆಯಿಂದ ಹೊರ ಬರೋದನ್ನು ಮರೆತು ಬಿಡಿ. ಮನೆಯಲ್ಲಿರಿ, ನಿಮ್ಮ ಮನೆಯಲ್ಲಿರಿ. ನಿಮ್ಮ ಮನೆಯ ಬಾಗಿಲು ಮುಂದೆ ಲಕ್ಷ್ಮಣ ರೇಖೆ ಹಾಕಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದರು.

ಮಾರ್ಚ್ 22 ಭಾನುವಾರದಂದು ನಾವೆಲ್ಲರೂ ಜನತಾ ಕರ್ಫ್ಯೂನಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಿದ್ದೇವೆ. ಪ್ರತಿಯೊಂದು ವರ್ಗದ ಜನ ನಮ್ಮ ಜೊತೆ ಬಂದರು. ಪ್ರತಿ ಭಾರತದ ವಾಸಿ ಜನತಾ ಕರ್ಫ್ಯೂ ಯಶಸ್ವಿಯಾಗುವಂತೆ ಮಾಡಿದರು ಎಂದು ದೇಶದ ಜನತೆಗೆ ಧ್ಯನವಾದ ಅರ್ಪಿಸಿದ ಪಿಎಂ ಮೋದಿ ಕೊರೊನಾ ವೈರಸ್ ಎಂಬ ಮಹಾಮಾರಿಯಿಂದ ವಿಶ್ವದಲ್ಲಿ ಏನಾಗ್ತಿದೆ ಎಂಬುದನ್ನು ನೋಡುತ್ತಿದ್ದೀರಿ. ಅಭಿವೃದ್ಧಿ ಹೊಂದಿದ್ದ ರಾಷ್ಟ್ರಗಳೂ ಕೂಡಾ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಸಾಮಾಜಿಕ ಅಂತರ ಕಾಯ್ದುಕೊಂಡರೆ ಮಾತ್ರ ಕೊರೊನಾದಿಂದ ಬದುಕುಳಿಯಬಹುದು. ಕೊರೊನೊ ವೈರಸ್ ಕೊಲ್ಲಲು ಅದರ ಚೈನ್ ಅನ್ನು ನಾವು ಕಡಿತಗೊಳಿಸಬೇಕಿದೆ.

ಸೋಶಿಯಲ್ ಡಿಸ್ಟನ್ಸ್ ಪ್ರತಿ ವ್ಯಕ್ತಿ, ಕುಟುಂಬ ಮತ್ತು ಪ್ರಧಾನ ಮಂತ್ರಿಗೂ ಇದೆ. ಕೊರೊನಾ ಬಗ್ಗೆ ಹರಡುತ್ತಿರುವ ಸುಳ್ಳು ಸುದ್ದಿಗಳನ್ನು ನಂಬಬೇಡಿ. ಇಂತಹ ಬೇಜವಾಬ್ದಾರಿತನ ಮುಂದಿನ ದಿನಗಳಲ್ಲಿ ದೊಡ್ಡ ಬೆಲೆ ತೆರಬೇಕಾಗುತ್ತದೆ. ಅದು ಎಷ್ಟು ದೊಡ್ಡ ಬೆಲೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಹೀಗಾಗಿ ಇಂದು ರಾತ್ರಿ 12 ಗಂಟೆಯಿಂದ ಸಂಪೂರ್ಣ ಭಾರತ ಲಾಕ್‍ಡೌನ್ ಆಗಲಿದೆ ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಘೋಷಿಸಿದ್ದಾರೆ. 
  • Blogger Comments
  • Facebook Comments

0 comments:

Post a Comment

Item Reviewed: ಇಂದು ಮಧ್ಯರಾತ್ರಿಯಿಂದಲೇ ಇಡೀ ದೇಶ ಸ್ಥಬ್ಧ : ಪ್ರಧಾನಿ ಮೋದಿ ಅಧಿಕೃತ ಘೋಷಣೆ Rating: 5 Reviewed By: karavali Times
Scroll to Top