ಕೋವಿಡ್-19 ಬಗ್ಗೆ ಬಂಟ್ವಾಳದಲ್ಲಿ ಕಂಟ್ರೋಲ್ ರೂಂ ಸ್ಥಾಪನೆ - Karavali Times ಕೋವಿಡ್-19 ಬಗ್ಗೆ ಬಂಟ್ವಾಳದಲ್ಲಿ ಕಂಟ್ರೋಲ್ ರೂಂ ಸ್ಥಾಪನೆ - Karavali Times

728x90

24 March 2020

ಕೋವಿಡ್-19 ಬಗ್ಗೆ ಬಂಟ್ವಾಳದಲ್ಲಿ ಕಂಟ್ರೋಲ್ ರೂಂ ಸ್ಥಾಪನೆ


ಕೊರೋನಾ ಸೋಂಕಿಗೆ ಸಂಬಂಧಿಸಿ ಸಾರ್ವಜನಿಕರಿಗೆ 24*7 ಸೇವೆ


ಬಂಟ್ವಾಳ (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರ ನಡವಳಿಯಂತೆ ಕೋವಿಡ್-19 (ಕೊರೋನಾ ಕಾಯಿಲೆ) ಕುರಿತು ತಾಲೂಕು ತಹಶೀಲ್ದಾರ್ ಕಛೇರಿಯಲ್ಲಿ ಹೆಚ್ಚುವರಿಯಾಗಿ ಕಂಟ್ರೋಲ್ ರೂಂ ತೆರೆಯಲಾಗಿದೆ. ದೂರವಾಣಿ ಸಂಖ್ಯೆ 08255-232120ಕ್ಕೆ ಕರೆ ಮಾಡಿ ಸಾರ್ವಜನಿಕರು ಸೇವೆ ಪಡೆದುಕೊಳ್ಳಬಹುದು. ಮಾ 31ರ ಮಧ್ಯರಾತ್ರಿವರೆಗೆ ದಿನದ 24 ತಾಸು ಕೂಡಾ ನಿರಂತರ ಸೇವೆ ದೊರೆಯಲಿದೆ.

ಜಿಲ್ಲಾ ವಿಪತ್ತು ನಿರ್ವಹಣಾ ಘಟಕ ಕಂಟ್ರೋಲ್ ರೂಂ (24*7) ಟೋಲ್ ಫ್ರೀ ನಂಬರ್ 1077, 24*7 ಉಚಿತ ಆರೋಗ್ಯ ಸಹಾಯವಾಣಿ 104 ಮತ್ತು 080-22208541 ಅಥವಾ ಕೇಂದ್ರ ಆರೋಗ್ಯ ಸಚಿವಾಲಯದ 24*7 ಉಚಿತ ಆರೋಗ್ಯ ಸಹಾಯವಾಣಿ +91-11-23978046 ಇಮೇಲ್ ncov2019@gmail.com ಸಂಪರ್ಕಿಸಬಹುದಾಗಿದೆ.

ಕೋವಿಡ್-19 ರೋಗದ ಲಕ್ಷಣಗಳು ಕಂಡುಬಂದರೆ ಸಾರ್ವಜನಿಕರು ಮೇಲಿನ ದೂರವಾಣಿ ಕೇಂದ್ರಗಳನ್ನು ಸಂಪರ್ಕಿಸಬಹುದು. ಅಥವಾ ಹೆಚ್ಚುವರಿಯಾಗಿ ತಾಲೂಕು ಕಛೇರಿಯ ಹೆಚ್ಚುವರಿ ಕಂಟ್ರೋಲ್ ರೂಂ ಸಂಖ್ಯೆಯನ್ನೂ ಸಂಪರ್ಕಿಸಬಹುದು. ತಕ್ಷಣ ಸೇವೆಯ ವ್ಯವಸ್ಥೆಯನ್ನು ತಾಲೂಕು ಆಡಳಿತದಿಂದಲೂ ಕೈಗೊಳ್ಳಲಾಗುವುದು ಎಂದು ಬಂಟ್ವಾಳ ತಾಲೂಕು ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಕೋವಿಡ್-19 ಬಗ್ಗೆ ಬಂಟ್ವಾಳದಲ್ಲಿ ಕಂಟ್ರೋಲ್ ರೂಂ ಸ್ಥಾಪನೆ Rating: 5 Reviewed By: karavali Times
Scroll to Top