ಫಸ್ಟ್ ನ್ಯೂರೋ ಲಿಂಕ್ : ಜಿಲ್ಲೆಯ ಮತ್ತಿಬ್ಬರಿಗೆ ಕೋವಿಡ್-19 ಪಾಸಿಟಿವ್ - Karavali Times ಫಸ್ಟ್ ನ್ಯೂರೋ ಲಿಂಕ್ : ಜಿಲ್ಲೆಯ ಮತ್ತಿಬ್ಬರಿಗೆ ಕೋವಿಡ್-19 ಪಾಸಿಟಿವ್ - Karavali Times

728x90

27 April 2020

ಫಸ್ಟ್ ನ್ಯೂರೋ ಲಿಂಕ್ : ಜಿಲ್ಲೆಯ ಮತ್ತಿಬ್ಬರಿಗೆ ಕೋವಿಡ್-19 ಪಾಸಿಟಿವ್ಮಂಗಳೂರು (ಕರಾವಳಿ ಟೈಮ್ಸ್) : ನಗರದ ಹೊರ ವಲಯದ ಪಡೀಲ್ ಬಳಿ ಇರುವ ಫಸ್ಟ್ ನ್ಯೂರೋ ಆಸ್ಪತ್ರೆಗೆ ಭೇಟಿ ನೀಡಿದ್ದ ಮಂಗಳೂರು ತಾಲೂಕಿನ ಕುಲಶೇಖರ ನಿವಾಸಿಗಳಾದ ತಾಯಿ-ಮಗನಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿರುವುದಾಗಿ ಜಿಲ್ಲಾಧಿಕಾರಿ ಪ್ರಕಟಣೆ ಮಾಹಿತಿ ನೀಡಿದೆ.

ಕೊರೋನಾ ರೋಗಿ ಸಂಖ್ಯೆ ಪಿ-432 ಚಿಕಿತ್ಸೆ ಪಡೆಯುತ್ತಿದ್ದ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಕುಲಶೇಖರದ 80 ವರ್ಷದ ಮಹಿಳೆ ಕೂಡಾ ಚಿಕಿತ್ಸೆ ಪಡೆಯುತ್ತಿದ್ದರು. ಅದೇ ಆಸ್ಪತ್ರೆಗೆ ಅವರ 45 ವರ್ಷದ ಪುತ್ರ ಭೇಟಿ ನೀಡುತ್ತಿದ್ದರು. ಪರೀಕ್ಷೆಗೆ ಕಳುಹಿಸಿದ್ದ ಇವರಿಬ್ಬರ ಗಂಟಲ ದ್ರವದ ವರದಿ ಇಂದು ಬಂದಿದ್ದು, ಕೋವಿಡ್-19 ಪಾಸಿಟಿವ್ ಎಂದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕಛೇರಿ ಪ್ರಕಟಣೆ ತಿಳಿಸಿದೆ. 
  • Blogger Comments
  • Facebook Comments

0 comments:

Post a Comment

Item Reviewed: ಫಸ್ಟ್ ನ್ಯೂರೋ ಲಿಂಕ್ : ಜಿಲ್ಲೆಯ ಮತ್ತಿಬ್ಬರಿಗೆ ಕೋವಿಡ್-19 ಪಾಸಿಟಿವ್ Rating: 5 Reviewed By: karavali Times
Scroll to Top