ದೇಶದಲ್ಲಿ ಕೊರೋನಾ ವೈರಸ್ಸಿಗೆ ಮೊದಲ ರಾಜಕಾರಣಿ ಬಲಿ : ಗುಜರಾತ್ ಹಿರಿಯ ಕಾಂಗ್ರೆಸ್ ಮುಖಂಡ ಕೋವಿಡ್-19 ಪಾಸಿಟಿವ್‍ನಿಂದ ಸಾವು - Karavali Times ದೇಶದಲ್ಲಿ ಕೊರೋನಾ ವೈರಸ್ಸಿಗೆ ಮೊದಲ ರಾಜಕಾರಣಿ ಬಲಿ : ಗುಜರಾತ್ ಹಿರಿಯ ಕಾಂಗ್ರೆಸ್ ಮುಖಂಡ ಕೋವಿಡ್-19 ಪಾಸಿಟಿವ್‍ನಿಂದ ಸಾವು - Karavali Times

728x90

27 April 2020

ದೇಶದಲ್ಲಿ ಕೊರೋನಾ ವೈರಸ್ಸಿಗೆ ಮೊದಲ ರಾಜಕಾರಣಿ ಬಲಿ : ಗುಜರಾತ್ ಹಿರಿಯ ಕಾಂಗ್ರೆಸ್ ಮುಖಂಡ ಕೋವಿಡ್-19 ಪಾಸಿಟಿವ್‍ನಿಂದ ಸಾವು



ಅಹಮದಾಬಾದ್ (ಕರಾವಳಿ ಟೈಮ್ಸ್) : ದೇಶದಲ್ಲಿ ಪ್ರಥಮ ರಾಜಕಾರಣಿ ಕೀವಿಡ್-19 ಮಹಾಮಾರಿಗೆ ಬಲಿಯಾಗಿದ್ದಾರೆ. ಗುಜರಾತ್ ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕ 67 ವರ್ಷದ ಬದ್ರುದ್ದೀನ್ ಶೇಖ್ ಅವರು ಕೊರೊನಾ ಸೋಂಕಿಗೆ ಮೃತಪಟ್ಟ ರಾಜಕಾರಣಿ.

ಎಪ್ರಿಲ್ 15 ರಂದು ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಅವರು ಅಹಮದಾದಬಾದಿನ ಎಸ್‍ವಿಪಿ ಆಸ್ಪತ್ರೆಗೆ ದಾಖಲಾಗಿದ್ದರು. 11 ದಿನಗಳ ಚಿಕಿತ್ಸೆ ಪಡೆಯುತ್ತಿದ್ದ ಅವರು ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ.

ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಬದ್ರುದ್ದೀನ್ ಶೇಖ್ ಅವರು ಬಡವರಿಗೆ ಆಹಾರ ವಿತರಿಸಲು ಹೋಗಿದ್ದರು. ಈ ಸಂದರ್ಭದಲ್ಲಿ ಅವರಿಗೆ ಶೋಂಕು ತಗಲಿರಬಹುದು ಎಂದು ಶಂಕಿಸಲಾಗಿದೆ.

ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಶಕ್ತಿ ಸಿನ್ಹಾ ಗೋಹಿಲ್ ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸಿ, ನನಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ಬದ್ರು ಬಾಯ್ ಅವರು 40 ವರ್ಷಗಳಿಂದ ಪರಿಚಿತರು. ಯೂತ್ ಕಾಂಗ್ರೆಸ್‍ನಿಂದ ಅವರು ಮೇಲೆ ಬಂದಿದ್ದರು ಎಂದು ಕಂಬನಿ ಮಿಡಿದಿದ್ದಾರೆ.

ಅಹಮದಾಬಾದ್ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರಾಗಿದ್ದ ಇವರು, ಗುಜರಾತಿನ ಕಾಂಗ್ರೆಸ್ಸಿನ ವಕ್ತಾರರಾಗಿಯೂ ಕಾರ್ಯನಿರ್ವಹಿಸಿದ್ದರು.
  • Blogger Comments
  • Facebook Comments

0 comments:

Post a Comment

Item Reviewed: ದೇಶದಲ್ಲಿ ಕೊರೋನಾ ವೈರಸ್ಸಿಗೆ ಮೊದಲ ರಾಜಕಾರಣಿ ಬಲಿ : ಗುಜರಾತ್ ಹಿರಿಯ ಕಾಂಗ್ರೆಸ್ ಮುಖಂಡ ಕೋವಿಡ್-19 ಪಾಸಿಟಿವ್‍ನಿಂದ ಸಾವು Rating: 5 Reviewed By: karavali Times
Scroll to Top